ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 92 : ಗುಣಮುಖರಾದವರು 15 ಮಂದಿ

July 7, 2020

ಮಡಿಕೇರಿ ಜು.7 : ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 
      ಇತರೆ ದೇಶ/ರಾಜ್ಯಗಳಿಂದ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. 
ಇತರೆ ದೇಶ/ರಾಜ್ಯ/ಜಿಲ್ಲೆಗಳಿಂದ ಕಳೆದ 14 ದಿನಗಳಲ್ಲಿ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರ ಪೈಕಿ ಸಂಪರ್ಕ ತಡೆಯಲ್ಲಿರುವ ಜನರ ವಿವರ ಕೆಳಕಂಡಂತಿದೆ.
1. ಇತರೆ ದೇಶದ  ಜನರು- 382. ಇತರೆ ರಾಜ್ಯದ ಜನರು-7113.  ಒಟ್ಟು ಜನರು-749
ಪ್ರಯೋಗಾಲಯ ಪರೀಕ್ಷಾ ವರದಿ ವಿವರ:
ಇಲ್ಲಿಯವರೆಗೆ ಒಟ್ಟು  10054  ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. • ಪಾಸಿಟಿವ್ ಪ್ರಕರಣಗಳು- 92  (ಹದಿನೈದು ಪ್ರಕರಣ ಗುಣಮುಖವಾಗಿದೆ)• ನೆಗೆಟಿವ್ ವರದಿ ಬಂದ ಪ್ರಕರಣಗಳು-8914• ವರದಿ ನಿರೀಕ್ಷಿತ ಪ್ರಕರಣಗಳು-1048
ದಾಖಲಿರುವ ಪ್ರಕರಣಗಳು:
 ಕೋವಿಡ್ ಆಸ್ಪತ್ರೆ : 45 ಕೋವಿಡ್ ಕೇರ್ ಸೆಂಟರ್ : 16 ಹೋಂ ಐಸೋಲೇಶನ್ : 15
ಇತರೆ ವಿಷಯಗಳು: 
ಇಂದು ಕೋವಿಡ್ ಸೋಂಕು ದೃಢಪಟ್ಟ ಪ್ರಕರಣಗಳ ಪೈಕಿ 5 ಜನ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.  ಇದರಿಂದ ಜಿಲ್ಲೆಯಲ್ಲಿ ಗುಣಮುಖಗೊಂಡು ಬಿಡುಗಡೆಯಾದ ಪ್ರಕರಣಗಳ ಸಂಖ್ಯೆ 15 ಆಗಿರುತ್ತದೆ. 

ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ:92

ಗುಣಮುಖಗೊಂಡು ಬಿಡುಗಡೆಗೊಂಡ ಪ್ರಕರಣಗಳ ಸಂಖ್ಯೆ:  15

ಮೃತರ ಸಂಖ್ಯೆ: 1

ಸಕ್ರಿಯ ಪ್ರಕರಣಗಳ ಸಂಖ್ಯೆ:  76

ಜಿಲ್ಲೆಯಲ್ಲಿರುವ ನಿಯಂತ್ರಿತ

ಪ್ರದೇಶಗಳ ಸಂಖ್ಯೆ:36