ಪಿಯುಸಿ ಪೂರಕ ಪರೀಕ್ಷಾ ದಿನ ಪ್ರಕಟ

08/07/2020

ಬೆಂಗಳೂರು ಜು.8 : ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಪಿಯುಸಿ ಪೂರಕ ಪರೀಕ್ಷಾ ದಿನಾಂಕವನ್ನು ಪ್ರಕಟ ಮಾಡಿ ಪಿಯುಸಿ ಬೋರ್ಡ್ ಆದೇಶ ಹೊರಡಿಸಿದೆ.
ಜುಲೈ 16 ರಿಂದ 27ರ ಒಳಗೆ ಪರೀಕ್ಷೆ ಮುಗಿಸಲು ಪಿಯುಸಿ ಬೋರ್ಡ್ ಸೂಚನೆ ನೀಡಿದೆ. ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಆಯಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಜೊತೆಗೆ ಕಾಲೇಜುಗಳು ಅಗತ್ಯ ವೇಳಾಪಟ್ಟಿ ರಚನೆ ಮಾಡಿಕೊಂಡು ಪೂರಕ ಪರೀಕ್ಷೆ ನಡೆಸಬೇಕಾಗಿದೆ. ಹೀಗಾಗಿ ಪಿಯುಸಿ ಬೋರ್ಡ್ ಘೋಷಣೆ ಮಾಡಿದ ದಿನಾಂಕದ ಒಳಗೆ ಪರೀಕ್ಷೆ ಮುಗಿಸಬೇಕು.