ತಲಕಾವೇರಿ ರಸ್ತೆಯಲ್ಲಿ ಎನ್‍ಡಿಆರ್‍ಎಫ್ ತಂಡ ಕಾರ್ಯಾಚರಣೆ

08/07/2020

ಮಡಿಕೇರಿ ಜು. 8 : ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಮಡಿಕೇರಿ ತಾಲ್ಲೂಕು, ಭಾಗಮಂಡಲ ಹೋಬಳಿ, ಚೇರಂಗಾಲ ಗ್ರಾಮದ ಸಮೀಪ ಭಾಗಮಂಡಲದಿಂದ ತಲಕಾವೇರಿಗೆ ಹೋಗುವ ಮಾರ್ಗ ಮಧ್ಯೆ ಬೆಟ್ಟ ಕುಸಿದು ಭಾಗಮಂಡಲ-ತಲಕಾವೇರಿ ಮಧ್ಯೆ ರಸ್ತೆ ಸಂಚಾರ ಬಂದ್ ಆಗಿತ್ತು. ಈ ಸ್ಥಳಕ್ಕೆ ಆ ವ್ಯಾಪ್ತಿಯ ಪ್ರಾಕೃತಿಕ ವಿಕೋಪ ಪರಿಹಾ ತಂಡವು ತೆರಳಿ ಪರಿಶೀಲಿಸಿ, ಕಾರ್ಯಾಚರಣೆಯನ್ನು ಕೈಗೊಂಡಿದೆ.
ಮಾರ್ಗದಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸಿ, ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಮುಂಜಾಗ್ರತಾ ಕ್ರಮವಾಗಿ ಈ ರಸ್ತೆಯಲ್ಲಿ ಮುಂಜಾನೆಯವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿಲಿಲ್ಲ.