ಮಡಿಕೇರಿ ಚೇಂಬರ್ ನಿಂದ ನಿರ್ಗಮಿತ ಪೊಲೀಸ್ ವರಿಷ್ಟಾಧಿಕಾರಿಗೆ ಸನ್ಮಾನ

July 8, 2020

ಮಡಿಕೇರಿ. ಜು.. 8 : ಕೊಡಗು ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಪೊಲೀಸ್ ವರಿಷ್ಟಾಧಿಕಾರಿಯಾಗಿ ಜನಪರ ಕರ್ತವ್ಯ ನಿರ್ವಹಿಸಿ ಇದೀಗ ವರ್ಗಾವಣೆ ಗೊಂಡಿರುವ ಡಾ. ಸುಮನ್ ಡಿ.ಪನ್ನೇಕರ್ ಅವರನ್ನು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್‍ನ ಪ್ರಮುಕರು ಸನ್ಮಾನಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಮಡಿಕೇರಿ ನಗರ ಚೇಂಬರ್ ಅಧ್ಯಕ್ಷಎಂ.ಧನಂಜಯ್, ಪ್ರಾಕೃತಿ ವಿಕೋಪ ಮತ್ತು ಕೊರೋನಾ ಲಾಕ್‍ಡೌನ್ ದಿನಗಳಲ್ಲಿ ಕೊಡಗಿನಲ್ಲಿ ಅತ್ಯುತ್ತಮವಾಗಿ ದಕ್ಷತೆಯಿಂದ ಕರ್ತವ್ಯ ಸಲ್ಲಿಸಿದ ಡಾ.ಸುಮನ್ ಪನ್ನೇಕರ್ ಅವರ ಸೇವಾ ಮನೋಭಾವವನ್ನು ಕೊಡಗಿನ ಜನತೆ ಎಂದಿಗೂ ಮರೆಯಲಾರರು. ಲಾಕ್‍ಡೌನ್ ದಿನಗಳಲ್ಲಿ ಮಡಿಕೇರಿ ನಗರ ಚೇಂಬರ್ ನ ಹಲವಾರು ಯೋಜನೆಗಳಲ್ಲಿ ಪೊಲೀಸರು ಕೈಜೋಡಿಸಿ ಜನರಿಗೆ ಸಹಕಾರಿಯಾದರು. ಪೊಲೀಸ್ ವರಿಷ್ಟಾಧಿಕಾಯಾಗಿ ಡಾ.ಸುಮನ್ ಪನ್ನೇಕರ್ ಮಾರ್ಗದರ್ಶನ ಮಡಿಕೇರಿಯ ವರ್ತಕರು ಮತ್ತು ಜನರಿಗೆ ಹಲವಾರು ರೀತಿಯಲ್ಲಿ ಸಹಕಾರಿಯಾಯಿತು ಎಂದು ಸ್ಮರಿಸಿಕೊಂಡರು.. ಮುಂದಿನ ಕರ್ತವ್ಯವಾಧಿಯ ದಿನಗಳಲ್ಲಿಯೂ ಡಾ.ಸುಮನ್ ಪನ್ನೇಕರ್ ಸೇವೆ ಸಮಾಜಕ್ಕೆ ಮತ್ತಷ್ಟು ಉತ್ತಮ ರೀತಿಯಲ್ಲಿ ದೊರಕಲಿ ಎಂದೂ ಧನಂಜಯ್ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸುಮನ್ ಪನ್ನೇಕರ್, ಕೊಡಗಿನಲ್ಲಿ ತಾನು ಸಲ್ಲಿಸಿದ ಸೇವಾದಿನಗಳು ಸದಾ ಸ್ಮರಣೀಯವಾಗಿರುತ್ತದೆ. ಕೊಡಗಿನ ಜನರು ಮತ್ತು ಚೇಂಬರ್‍ಆಫ್ ಕಾಮರ್ಸ್ ಸದಸ್ಯರು ಪೊಲೀಸ್ ಇಲಾಖೆಗೆ ಅಗತ್ಯ ಸಹಕಾರವನ್ನು ನೀಡುತ್ತಲೇ ಬಂದಿದ್ದಾರೆ. ಇವರ ನೆರವನ್ನೂ ಪೊಲೀಸ್ ಇಲಾಖೆ ಸದಾಗುರುತಿಸುತ್ತದೆ ಎಂದು ಹೇಳಿದರು. ಕೊಡಗಿನ ಜನಕೆ, ವರ್ತಕರು ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರನ್ನು ಪೊಲೀಸ್ ಇಲಾಖೆಗೆ ನೀಡುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭ ಕೊಡಗು ಜಿಲ್ಲಾ ಚೇಂಬರ್‍ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ನವೀನ್‍ಅಂಬೆಕಲ್, ಮಡಿಕೇರಿ ನಗರಚೇಂಬರ್‍ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಅನ್ವೇಕರ್, ಉಪಾಧ್ಯಕ್ಷ ಅರವಿಂದ್ ಕೆಂಚಟ್ಟಿ, ಖಚಾಂಚಿ ಅಹಮ್ಮದ್‍ಕಬೀರ್, ನಿರ್ದೇಶಕರುಗಳಾದ ಅನುರಾಗ್, ಸವಿತಾಅರುಣ್, ಬಿ.ಎಂ.ರಾಜೇಶ್ ಹಾಜರಿದ್ದರು.