ನಟ ಸುಶೀಲ್ ಆತ್ಮಹತ್ಯೆಗೆ ಶರಣು
July 8, 2020

ಮಂಡ್ಯ ಜು. 8 : ಈಗಷ್ಟೆ ಸ್ಯಾಂಡಲ್ವುಡ್ಗೆ ಕಾಲಿಟ್ಟು, ಭವಿಷ್ಯದಲ್ಲಿ ನಾಯಕನಾಗುವ ಕನಸು ಕಂಡಿದ್ದ ಉದಯೋನ್ಮುಖ ನಟ ಸುಶೀಲ್ ಗೌಡ. ತಮ್ಮ ಹುಟ್ಟೂರಾದ ಮಂಡ್ಯದಲ್ಲಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ದುನಿಯಾ ವಿಜಯ್ ಅವರ ಸಲಗ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸುಶೀಲ್ ನಟಿಸಿದ್ದರು.
ಸುಶೀಲ್ ಕುಮಾರ್ (30) ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದು, ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು.ಕಳೆದ ಮೂರು ತಿಂಗಳಿನಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ನಿಂದಾಗಿ ಜಿಮ್ ತೆರೆದಿರಲಿಲ್ಲ. ಹೀಗಾಗಿ ಮೂರು ತಿಂಗಳ ಹಿಂದೆ ಮಂಡ್ಯಗೆ ಬಂದು ನೆಲೆಸಿದ್ದರು. ವಿವಿ ನಗರದ ತಮ್ಮದೇ ಮನೆಯಲ್ಲಿ ಸುಶೀಲ್ ಕುಮಾರ್ ನೆಲೆಸಿದ್ದರು. ಇಂಡುವಾಳು ಗ್ರಾಮದಲ್ಲಿರುವ ತಮ್ಮ ಸ್ನೇಹಿತನ ಮನೆಗೆ ತೆರಳಿದ್ದರು. ಅಲ್ಲಿಯೇ ನೇಣು ಬಿಗಿದುಕೊಂಡು ಸುಶೀಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
