ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ಪಿ.ಎಂ.ಸಂದೀಪ್, ಕಾರ್ಯದರ್ಶಿಯಾಗಿ ಸತೀಶ್ ಅಧಿಕಾರ ಸ್ವೀಕಾರ

ಮಡಿಕೇರಿ ಜು. 8 : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ಪೊಳಕಂಡ ಎಂ.ಸಂದೀಪ್ ಮತ್ತು ಕಾರ್ಯದರ್ಶಿಯಾಗಿ ಚೆರುಮಾಡಂಡ ಸತೀಶ್ ಸೋಮಣ್ಣ ಅಧಿಕಾರ ಸ್ವೀಕರಿಸಿದ್ದಾರೆ.
2020-21 ನೇ ಸಾಲಿನ ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಆಡಳಿತ ಮಂಡಳಿಗೆ ಮಿಸ್ಟಿ ಹಿಲ್ಸ್ ನ ಸಂಸ್ಪಾಪಕ ಅಧ್ಯಕ್ಷ ಬಿ.ಜಿ.ಅನಂತಶಯನ ಪದಗ್ರಹಣ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅನಂತಶಯನ, ಭಾರತದಲ್ಲಿ 1.50 ಲಕ್ಷ ರೋಟರಿ ಸದಸ್ಯರು ಕೋವಿಡ್ 19 ರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಈ ವರೆಗೂ 30 ಕೋಟಿರು. ಆರ್ಥಿಕ ನೆರವು ನೀಡಿದ್ದಾರೆ. 75 ಸಾವಿರ ಪಿ.ಪಿ.ಇ ಕಿಟ್ ಗಳನ್ನೂ ದೇಶದಾದ್ಯಂತ ರೋಟರಿ ಸಂಸ್ಥೆ ಸರ್ಕಾರಕ್ಕೆ ನೀಡಿದೆ. ಲಕ್ಷಾಂತರ ಜನರಿಗೆ ದಿನಸಿಯನ್ನೂ ರೋಟರಿಯು ಸೇವಾ ಸಂಸ್ಥೆಯಾಗಿ ನೀಡಿದೆ ಎಂದು ಮಾಹಿತಿ ನೀಡಿದರು.
ರೋಟರಿ ಎಂಬ ಸಾಮಾಜಿಕ ಸೇವಾ ಸಂಸ್ಥೆಯ ಶಕ್ತಿ, ಸಾಮಥ್ರ್ಯವನ್ನು ಕೋರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಕರಿಸಿ ನಿರೂಪಿಸಲು ಇದೊಂದು ಸೂಕ್ತ ಅವಕಾಶವಾಗಿದೆ. ವಿಶ್ವದ ರೋಟರಿ ಸದಸ್ಯರು ಜನಸೇವೆಗೆ ಈ ಅವಕಾಶವನ್ನು ಬಳಸಿಕೊಂಡು ಜನತೆಗೆ ಅಗತ್ಯ ನೆರವು ನೀಡಿ ಎಂದು ಅಂತರರಾಷ್ಟ್ರೀಯ ರೋಟರಿ ಅಧ್ಯಕ್ಷ ಹೋಲ್ಗರ್ ನ್ಯಾಕ್‍ರೂಟ್‍ಕರೆ ನೀಡಿದ್ದು ಅದರಂತೆ ಪ್ರತೀಯೋರ್ವ ರೋಟರಿ ಸದಸ್ಯನ ಧ್ಯೇಯವಾಗ ಬೇಕೆಂದೂ ಅನಂತಶಯನ ಸಲಹೆ ನೀಡಿದರು.
ಭವಿಷ್ಯದ ಪ್ರಜೆಗಳನ್ನು ಮೌಲ್ಯಯುತ ಶಿಕ್ಷಣದೊಂದಿಗೆ ಸಮಾಜಕ್ಕೆ ನೀಡುವ ಮಹತ್ತರ ಪಾತ್ರ ವಹಿಸುವ ಶಿಕ್ಷಣ ಸಂಸ್ಥೆಗಳು ಕೋರೋನಾದಿಂದಾಗಿ ಸಂಕಷ್ಟಕ್ಕೊಳಗಾಗಿದೆ. ಹೀಗಾಗಿ ರೋಟರಿ ಸಂಸ್ಥೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಕಷ್ಟಕ್ಕೆ ಸಾಧ್ಯವಾದಷ್ಟು ಕಾರ್ಯಯೋಜನೆಗಳ ಮೂಲಕ ಸಹಾಯ ಮಾಡುವಂತೆ ಮನವಿ ಮಾಡಿದರು.
ಮಿಸ್ಟಿ ಹಿಲ್ಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಪಿ.ಎಂ. ಪೊಳಕಂಡ ಸಂದೀಪ್, ಈ ರೋಟರಿ ವರ್ಷದಲ್ಲಿ 6 ಸಾವಿರ ಸಸಿಗಳನ್ನು ಜಿಲ್ಲಾಯೋಜನೆಯಂತೆ ಮಿಸ್ಟಿ ಹಿಲ್ಸ್ ನಿಂದ ನೆಡಲಾಗುತ್ತದೆ. ಪ್ರತೀಯೋರ್ವ ವ್ಯಕ್ತಿಯೂ ಸಕ್ಕರೆ ಮತ್ತು ಎಣ್ಣೆ ಬಳಕೆಯನ್ನು ಕಡಮೆ ಮಾಡಿ ಆರೋಗ್ಯ ಸುರಕ್ಷತೆಗೆ ಕಾರಣವಾಗುವ ಏಕ್‍ಚಮಚ್‍ಕಮ್.. ಚಾರ್‍ಕದಮ್ ಆಗೇ ಎಂಬ ರೋಟರಿಜಿಲ್ಲೆಯ ಪ್ರಮುಖ ಆರೋಗ್ಯಯೋಜನೆಯನ್ನೂ ಜನಸಮುದಾಯಕ್ಕೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಶಾಲೆಯಲ್ಲಿ ಸ್ವಚ್ಚತೆಯೊಂದಿಗೆ ಸೌಕರ್ಯ ಕಲ್ಪಿಸುವ ಹ್ಯಾಪಿ ಸ್ಕೂಲ್ ಎಂಬ ಯೋಜನೆ ಜಾರಿಗೊಳಿಸಲಾಗುತ್ತದೆಯಲ್ಲದೇ ಅಂಗನವಾಡಿಯನ್ನು ದತ್ತು ಪಡೆದು ಅಗತ್ಯ ಸೌಲಭ್ಯಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ರೋಟರಿ ವಲಯ 6 ರ ಸಹಾಯಕ ರಾಜ್ಯಪಾಲ ಪಿ.ಕೆ.ರವಿ ವಿಡಿಯೋ ಸಂವಾದದ ಮೂಲಕ ಮಾತನಾಡಿ, ರೋಟರಿ ಹೊಸ ವರ್ಷದಲ್ಲಿ ಮಿಸ್ಟಿ ಹಿಲ್ಸ್ ನಾನಾ ಕಾಯ9ಯೋಜನೆ ಆಯೋಜಿಸುವಂತೆ ಸೂಚಿಸಿದರು.
ಮಿಸ್ಟಿ ಹಿಲ್ಸ್ ನ ವಾರದ ವಾರ್ತಾ ಸಂಚಿಕೆರೋಟೋ ಮಿಸ್ಟಿಯನ್ನು ಜೋನಲ್ ಲೆಫ್ಟಿನೆಂಟ್ ಜಿ.ಆರ್.ರವಿಶಂಕರ್ ಬಿಡುಗಡೆಗೊಳಿಸಿದರು.
ಮಿಸ್ಟಿ ಹಿಲ್ಸ್ ನಿರ್ಗಮಿತ ಅಧ್ಯಕ್ಷಎಂ.ಆರ್.ಜಗದೀಶ್ ಪ್ರಶಾಂತ್, ಕಾರ್ಯದರ್ಶಿ ಪ್ರಮೋದ್ ಕುಮಾರ್‍ರೈ ಹಾಜರಿದ್ದರು. ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷ, ಕಾರ್ಯದರ್ಶಿ ಪದಗ್ರಹಣ ಕಾರ್ಯಕ್ರಮವನ್ನು ಸದಸ್ಯರು ವಿಡಿಯೋ ಮಾಧ್ಯಮದ ಮೂಲಕ ವೀಕ್ಷಿಸಿದರು.

…