ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

08/07/2020

ಮಡಿಕೇರಿ ಜು. 8 : 2019ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ, ರಾಜ್ಯ ಸರ್ಕಾರದ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಶಾಲೆಗಳಲ್ಲಿನ ಖಾಯಂಗೊಂಡ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು, ಕೇಂದ್ರ ಸರ್ಕಾರದ ಸಿ,ಬಿ,ಎಸ್.ಇ. ಮತ್ತು ಸಿ.ಐ,ಎಸ್.ಇ ಮಾನ್ಯತೆ ಪಡೆದ ಶಾಲೆಗಳ ಖಾಯಂಗೊಂಡ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಅರ್ಜಿಯನ್ನು ಸ್ವಯಂ ತಾವೇ ಆನ್‍ಲೈನ್, ಮೂಲಕhttp://nationalawardstoteachers.mhrd.gov.in/nat/wlcome.aspxಅಂತರ್ಜಾಲ ತಾಣದ ಮೂಲಕ] ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಧಿಯನ್ನು ಜುಲೈ 11 ರವರೆಗೆ ವಿಸ್ತರಿಸಲಾಗಿದೆ ಮತ್ತು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಶಿಕ್ಷಕರು/ಮುಖ್ಯ ಶಿಕ್ಷಕರು ಹಾರ್ಡ್ ಕಾಪಿ ಪ್ರತಿಯನ್ನು ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಗೆ ಸಲ್ಲಿಸಬಹುದು ಎಂದು ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.