ಜಿಲ್ಲೆಯಲ್ಲಿ ಮತ್ತೆ ಮೂರು ಪಾಸಿಟಿವ್ ಪ್ರಕರಣ ಪತ್ತೆ

08/07/2020

ಮಡಿಕೇರಿ ಜು. 8 : ಕೊಡಗಿನಲ್ಲಿ ಇಂದು ಸೋಂಕಿನ ಮೂರು ಹೊಸ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಕುಶಾಲನಗರ ಮೂಲದ 36 ವರ್ಷದ ಮಹಾರಾಷ್ಟ್ರದಿಂದ ಬಂದು ಆಸ್ಪತ್ರೆಗೆ ನೇರ ದಾಖಲಾದ ಸೋಂಕಿತ.
2.ಚೇರಂಬಾಣೆ ಮೂಲದ 77 ವರ್ಷದ ಹಿರಿಯ ನಾಗರಿಕರಿಗೆ ಸೋಂಕು. ಮೈಸೂರಿನಿಂದ ಹಿಂದಿರುಗಿದ್ದರು.
3.ಪೆರಂಬಾಡಿ ಗ್ರಾಮದ ಸೋಂಕಿತರ 8 ವರ್ಷದ ಮಗಳಿಗೆ ಸೋಂಕು ದೃಢಪಟ್ಟಿದೆ.
ಗುಣಮುಖರಾದರ ಸಂಖ್ಯೆ 16,ಸಕ್ರಿಯ ಪ್ರಕರಣ 78. ಒಟ್ಟು ಕನ್ಸೈನ್ಮೆಂಟ್ ವಲಯ 37, ಮರಣ 1, ಹೊಸದಾಗಿ ಚೇರಂಬಾಣೆಯಲ್ಲಿ ಕಂಟೋನ್ಮೆಂಟ್ ವಲಯ ಆರಂಭವಾಗಿದೆ.