ಕೊಡಗು ಚ್ಯಾರಿಟೇಬಲ್ ಗ್ರೂಪ್ ನಿಂದ ಸೀಲ್ ಡೌನ್ ಕುಟುಂಬಗಳಿಗೆ ತರಕಾರಿ ಕಿಟ್ ವಿತರಣೆ

09/07/2020

ಸಿದ್ದಾಪುರ ಜು.9 : ಪಾಸಿಟಿವ್ ಪ್ರಕರಣ ಪತ್ತೆ ಹಿನ್ನೆಲೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಕ್ರಮಕೈಗೊಂಡು ಸೀಲ್ ಡೌನ್ ಮಾಡಿರುವ ವಿರಾಜಪೇಟೆತಾ ಲ್ಲೂಕಿನ ಹೊಲಮಾಳ ಗ್ರಾಮದಲ್ಲಿ ಕೊಡಗು ಚ್ಯಾರಿಟೇಬಲ್ ಚನ್ನಯ್ಯನಕೊಟೆ ಗ್ರೂಪ್ ವತಿಯಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತರಕಾರಿ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕಾರ್ಮಿಕ ಕುಟುಂಬಗಳೇ ಅಧಿಕವಾಗಿರುವ ಗ್ರಾಮದಲ್ಲಿ ಅಂದಾಜು 300 ಕುಟುಂಬಗಳಿಗೆ ಬೇಕಾದ ಅಗತ್ಯತರಕಾರಿ ವಸ್ತುಗಳ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭಜಿಲ್ಲಾ ಪಂಚಾಯಿತಿ ಸದಸ್ಯ ಲೀಲಾವತಿ ಮಾತನಾಡಿ ಸೀಲ್ ಡೌನ್ ವ್ಯಾಪ್ತಿಯಜನರು ಸಂಕಷ್ಟಕ್ಕೊಳಗಾಗಿರುವ ದನ್ನು ಮನಗಂಡು ಚ್ಯಾರಿಟೇಬಲ್ ಚೆನ್ನಯ್ಯನಕೋಟೆ ಗ್ರೂಪ್ ವತಿಯಿಂದ ಗ್ರಾಮದ ಕುಟುಂಬಗಳಿಗೆ ತರಕಾರಿ ಕಿಟ್ ವಿತರಣೆ ಮಾಡಿ ಮಾನವೀಯತೆ ತೋರಿದ್ದಾರೆ . ಗ್ರಾಮದಲ್ಲಿ ಇಂತಹ ಸಮಾಜ ಸೇವಾ ಸಂಘಟನೆಗಳಿಂದ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಅಭಿನಂದಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್ ಕಿಟ್ ವಿತರಿಸಿ ಚ್ಯಾರಿಟೇಬಲ್ ಸದಸ್ಯರಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .
ಈ ಸಂದರ್ಭ ಗ್ರಾಮದ ಪ್ರಮುಖರಾದ ಹಮೀದ್ ಹಾಜಿ, ಅಜೀಜ್, ಜಮಾಅತ್‍ , ಉಪಾಧ್ಯಕ್ಷ ಮೊಹಮ್ಮದ್ ಅಲಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ದಿನೇಶ್, ಪಂಚಾಯಿತಿ ಸದಸ್ಯರಾದ ವಿಜು, ಶೀಲಾ, ಆಶಾ ಕಾರ್ಯಕರ್ತರಾದ ಇಂದಿರಾ, ಲಲಿತ, ಅಂಗನವಾಡಿ ಕಾರ್ಯಕರ್ತೆ ಸರಸು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರಮೀಳಾ, ಸಮಾಜ ಸೇವಕರಾದ ಅಬ್ದುಲ್‍ರಹ್ಮಾನ್(ಅಂದು), ಮಂಜು, ಕೊಡಗು ಚ್ಯಾರಿಟೇಬಲ್ ಗ್ರೂಪ್ ಅಧ್ಯಕ್ಷ ಎಚ್.ಎ ಮುಸ್ತಫಾ , ಖಜಾಂಜಿ ನೌಫಲ್, ಪ್ರಮುಖರಾದ ಪಿ.ಎಚ್ ನಸೀರ್ , ಎಸ್‍ಎಲ್‍ಎಸ್‍ಅಶ್ರಫ್, ಎನ್.ಕೆಕೋಯ, ಎನ್.ಕೆಜಲೀಲ್ , ಶಬೀರ್ ಶಬ್ಬು, ಎಂ.ಎ ಶಾಹಿಲ್ , ಎಂ.ಎ ಜಂಷೀರ್ , ಆಲಂಬತ್ ಶಮೀರ್, ಎ ಎಂ ಅಶ್ರಫ್, ಇರ್ಸಾದ್, ಮುಜೀಬ್, ಪಿ.ಬಿ ಮುಸ್ತಫಾ, ಎಂ.ಎ ಅಕ್ಬರ್, ನಜ಼ೀರ್, ಜಾಫರ್, ಜಲೀಲ್, ಹುಸೈನ್, ಅಕ್ಬರ್‍ರಜಾಕ್ ಮುಸ್ಲಿಯಾರ್ ಇನ್ನಿತರರು ಪಾಲ್ಗೊಂಡಿದ್ದರು.