ಗಡಿಯಿಂದ ಹಿಂದೆ ಸರಿದ ಸೇನಾಪಡೆ

09/07/2020

ನವದೆಹಲಿ ಜು.9 : ಗಲ್ವಾನ್ ಸಂಘರ್ಷದ ಬಳಿಕ ಗಡಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಭಾರತ ಮತ್ತು ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸಂಪೂರ್ಣವಾಗಿ ಸೈನಿಕರನ್ನು ಹಿಂದಕ್ಕೆ ಪಡೆದುಕೊಂಡಿವೆ.
ಕಳೆದ 2 ದಿನಗಳಿಂದ ನಡೆದಿದ್ದ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ಇಂದು ಪೂರ್ಣಗೊಂಡಿದ್ದು ವಿವಾದಿತ ಗಲ್ವಾನ್ ಕಣಿವೆಯಿಂದ ಚೀನಾ ಸೇನೆ ತನ್ನ ಯೊಧರನ್ನು 2 ಕಿ,ಮೀ ಹಿಂದಕ್ಕೆ ಕರೆಯಿಸಿಕೊಂಡಿದೆ. ಈ ಬಗ್ಗೆ ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿದ್ದು, ಗಲ್ವಾನ್ ಕಣಿವೆಯಲ್ಲಿ ಮೊಕ್ಕಾಂ ಹೂಡಿದ್ದ ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸುಮಾರು 2 ಕಿ.ಮೀ ನಷ್ಚು ಹಿಂದಕ್ಕೆ ಹೋಗಿದೆ.
ಸೇನೆ ಹಿಂದಕ್ಕೆ ಕರೆಯಿಸಿಕೊಳ್ಳುವ ಕಾರ್ಯಕ್ಕೆ ಕಳೆದ 2 ದಿನಗಳ ಹಿಂದೆಯೇ ಚೀನಾ ಸೇನೆ ಚಾಲನೆ ನೀಡಿತ್ತು. ಇಂದು ಆ ಕಾರ್ಯ ಪೂರ್ಣಗೊಂಡಿದೆ. ವಿವಾದಿತ ಸ್ಥಳದಲ್ಲಿ ಚೀನಾ ಸೈನಿಕರು ನಿರ್ಮಿಸಿದ್ದ ಸಂಪೂರ್ಣ ಟೆಂಟ್ ಗಳನ್ನು ತೆರವು ಗೊಳಿಸಿದ್ದು ಮಾತ್ರವಲ್ಲದೇ ಎಲ್ಲ ಸೈನಿಕರೂ ಪ್ಯಾಟ್ರಲಿಂಗ್ ಪಾಯಿಂಟ್ 2 ಕಿ.ಮೀ ಹಿಂದಕ್ಕೆ ಹೋಗಿದ್ದಾರೆ. ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪ್ರದೇಶಗಳಿಂದ ಉಭಯ ಸೈನಿಕರೂ ಸಂಪೂರ್ಣವಾಗಿ ತಮ್ಮ ತಮ್ಮ ಟೆಂಟ್ ಗಳನ್ನು ಖಾಲಿ ಮಾಡಿ ಹಿಂದಕ್ಕೆ ಸರಿದಿದ್ದಾರೆ.