ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

09/07/2020

ಬೆಂಗಳೂರು ಜು.9 : ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ತಮಾದಿಂದ ಬಳಲುತ್ತಿರುವ ಜಯಂತಿ ಅವರನ್ನು ಪುತ್ರ ಕೃಷ್ಣ ಕುಮಾರ್ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಕ್ರಮ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಕೆ ಎಸ್ ಸತೀಶ್ ಮತ್ತು ತಂಡ ನಟಿ ಜಯಂತಿ ಅವರನ್ನು ವೆಂಟಿಲೇಟರ್??ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಎಚ್ಚರದಿಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೀಗೆ ಎರಡು ವರ್ಷಗಳ ಹಿಂದೆ ಅರ್ಥಾತ್ 2018ರ ಮಾರ್ಚ್ ತಿಂಗಳಲ್ಲಿಯೂ ಇದೇ ರೀತಿ ಅಸ್ತಮಾ ಉಲ್ಬಣಿಸಿ ಉಸಿರಾಟದ ತೊಂದರೆ ಎದುರಾಗಿತ್ತು. ಆಗಲೂ ಜಯಂತಿ ಅವರನ್ನು ವಿಕ್ರಮ್ ಆಸ್ಪತ್ರೆಯಲ್ಲೇ ವೈದ್ಯರಾದ ಡಾ. ಸತೀಶ್ ಅವರೇ ಚಿಕಿತ್ಸೆ ನೀಡಿದ್ದರು.