ಜಿಲ್ಲೆಯಲ್ಲಿ ಮತ್ತೆ 26 ಪಾಸಿಟಿವ್ ಪ್ರಕರಣ : ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಮಡಿಕೇರಿ ಜು.09 : ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಒಟ್ಟು 26 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆಯ ಖಾಸಗಿ ರೆಸಾರ್ಟ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ 25, 22 ಮತ್ತು 25 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ಕಿರುಂದಾಡು ಪಾರಾಣೆ ಗ್ರಾಮದ ನಿವಾಸಿ, ಬೆಂಗಳೂರಿನ ಪ್ರಯಾಣದ ಇತಿಹಾಸ ಇರುವ 34 ವರ್ಷದ ಪುರುಷ ಮತ್ತು 29 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಇವರು ದಂಪತಿಗಳಾಗಿದ್ದಾರೆ.
ಮಡಿಕೇರಿ ತಾಲ್ಲೂಕಿನ ಸಂಪಾಜೆಯ ಆಸ್ಪತ್ರೆ ವಸತಿ ಗೃಹದಲ್ಲಿ ವಾಸವಿರುವ 21 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಮಡಿಕೇರಿ ತಾಲ್ಲೂಕಿನ ಸಂಪಾಜೆಯ ಕೂಟೆಲು ನಿವಾಸಿಯಾದ 30 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ ತಾಲ್ಲೂಕು ಪಾರಾಣೆಯ ಕೈಕಾಡು ಗ್ರಾಮದ ನಿವಾಸಿ ಜ್ವರ ಲಕ್ಷಣಗಳಿದ್ದ 69 ವರ್ಷದ ಮಹಿಳೆ, 44 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಮತ್ತು ಅದೇ ಗ್ರಾಮದ 42 ವರ್ಷದ ಮಹಿಳೆಯಾದ ಆರೋಗ್ಯ ಕಾರ್ಯಕರ್ತರೊಬ್ಬರಿಗೂ ಸೋಂಕು ದೃಢಪಟ್ಟಿದೆ.
ಜೊತೆಗೆ ಮಡಿಕೇರಿ ತಾಲ್ಲೂಕು ಪಾರಾಣೆಯ ಬಾವಲಿ ಗ್ರಾಮದ 35 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ತಾಲ್ಲೂಕು ಕುದುರೆಪಾಯ ಗ್ರಾಮದ ನಿವಾಸಿ ಜ್ವರ ಲಕ್ಷಣವಿದ್ದ 56 ವರ್ಷದ ಮಹಿಳೆಯೊಬ್ಬರಿಗೆ ಮತ್ತು ಮಡಿಕೇರಿ ತಾಲ್ಲೂಕು ತಣ್ಣಿಮಾನಿ ಗ್ರಾಮದ ಜ್ವರ ಲಕ್ಷಣವಿದ್ದ 55 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ ತಾಲ್ಲೂಕು ಸಣ್ಣಪುಲಿಕೋಟು ಗ್ರಾಮದ ಜ್ವರ ಲಕ್ಷಣವಿದ್ದ 42 ವರ್ಷದ ಪುರುಷ, ತಲಕಾವೇರಿ, ಭಾಗಮಂಡಲದ ಜ್ವರ ಲಕ್ಷಣವಿದ್ದ 28 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ತಾಲ್ಲೂಕು ಚೇರಂಬಾಣೆಯ ಕೋಟೂರು ನಿವಾಸಿ, ಬೆಂಗಳೂರಿನಿಂದ ಹಿಂದಿರುಗಿದ್ದ 27 ವರ್ಷದ ಪುರುಷರೊಬ್ಬರಿಗೂ ಸಹ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ತಾಲ್ಲೂಕು ಮಣಜೂರು ಶಿರಂಗಾಲ ಗ್ರಾಮದ ಜ್ವರ ಲಕ್ಷಣಗಳಿದ್ದ 21, 28 ಮತ್ತು 35 ವರ್ಷದ ಪುರುಷರಿಗೆ, ಸೋಮವಾರಪೇಟೆ ತಾಲ್ಲೂಕು ನಂಜರಾಯಪಟ್ಟಣದ ಪೈಸಾರಿಯ ಜ್ವರ ಲಕ್ಷಣಗಳಿದ್ದ 26 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ತಾಲ್ಲೂಕು ಗುಡ್ಡೆಹೊಸೂರು ಗ್ರಾಮದ ಬೊಳ್ಳೂರುವಿನ 49 ವರ್ಷದ ಮಹಿಳೆ, ನಂಜರಾಯಪಟ್ಟಣದ ಬೆಳ್ಳಿ ಕಾಲೋನಿಯ ವಾಸಿ, ಜ್ವರ ಲಕ್ಷಣವಿದ್ದ 09 ವರ್ಷದ ಹುಡುಗಿ, ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು ನಂಜರಾಯಪಟ್ಟಣದ ಅಮಂಗಲ ಗ್ರಾಮದ ವಾಸಿ, ಜ್ವರ ಲಕ್ಷಣವಿದ್ದ 08 ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ವಾಸಿ, ಜ್ವರ ಲಕ್ಷಣವಿದ್ದ 23 ವರ್ಷದ ಪುರುಷ, ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ತೊರೆನೂರು ಗ್ರಾಮದ ವಾಸಿ, ಜ್ವರ ಲಕ್ಷಣವಿದ್ದ 50 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ವಾಸಿ, ಕೋವಿಡ್ ಸಂಬಂಧಿತ ಕಾರ್ಯದಲ್ಲಿರುವ 30 ವರ್ಷದ ಪುರುಷರೊಬ್ಬರಿಗೂ ಸಹ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 20 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ ಖಾಸಗಿ ರೆಸಾರ್ಟ್ ಕಕ್ಕಬ್ಬೆ, ಕಿರುಂದಾಡು ಪಾರಾಣೆ ಅಂಚೆ, ಆರೋಗ್ಯ ಕಾರ್ಯಕರ್ತರ ವಸತಿ ಗೃಹ ಸಂಪಾಜೆ, ಕೂಟೆಲು ಸಂಪಾಜೆ, ಕೈಕಾಡು ಪಾರಾಣೆ ಅಂಚೆ, ಬಾವಲಿ ಪಾರಾಣೆ ಅಂಚೆ, ಕುದುರೆಪಾಯ ಗ್ರಾಮ, ತಣ್ಣಿಮಾನಿ ಗ್ರಾಮ, ಸಣ್ಣಪುಲಿಕೋಟು ಗ್ರಾಮ, ಕೋಟೂರು ತಲಕಾವೇರಿ ಭಾಗಮಂಡಲ, ಚೇರಂಬಾಣೆ, ಮಣಜೂರು ಶಿರಂಗಾಲ, ನಂಜರಾಯಪಟ್ಟಣ ಪೈಸಾರಿ, ಬೊಳ್ಳೂರು, ಗುಡ್ಡೆಹೊಸೂರು, ಬೆಳ್ಳಿ ಕಾಲೋನಿ ನಂಜರಾಯಪಟ್ಟಣ, ಅಮಂಗಲ ಗ್ರಾಮ, ವಾಲ್ನೂರು, ನಂಜರಾಯಪಟ್ಟಣ, ಹೆಬ್ಬಾಲೆ, ತೊರೆನೂರು ಪೆರಾಜೆಯಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಸೋಂಕಿತ ಪ್ರಕರಣಗಳು ಒಟ್ಟು 122 ಕ್ಕೆ ಏರಿಕೆಯಾಗಿದೆ. ಈ ಪೈಕಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು 16 ಆಗಿದ್ದು, ಜಿಲ್ಲೆಯಲ್ಲಿ 105 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ನಿಂದ ಮೃತ ಪಟ್ಟ ಪ್ರಕರಣಗಳು 01 ಆಗಿದ್ದು, ಜಿಲ್ಲೆಯಲ್ಲಿ ಒಟ್ಟು 58 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
