ಮಡಿಕೇರಿ ನಗರ ಬಿಜೆಪಿಯಿಂದ ಸೀಲ್‍ಡೌನ್ ನಿವಾಸಿಗಳಿಗೆ ದಿನಸಿ ಕಿಟ್ ವಿತರಣೆ

09/07/2020

ಮಡಿಕೇರಿ ಜು. 9 : ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ ಹಿನ್ನೆಲೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತ ಕ್ರಮಕೈಗೊಂಡು ಸೀಲ್ ಡೌನ್ ಮಾಡಿರುವ ನಗರದ ಮಹದೇವಪೇಟೆಯ ನಿವಾಸಿಗಳಿಗೆ ಹಾಗೂ ಅಂಗವಿಕಲರಿಗೆ ಮಡಿಕೇರಿ ನಗರ ಬಿಜೆಪಿ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಮಡಿಕೇರಿ ನಾಗರಾಧ್ಯಕ್ಷ ಮನು ಮಂಜುನಾಥ್, ಖಜಾಂಚಿ ಎಸ್.ಮುರುಗನ್, ಯುವಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ, ವಾರ್ಡ್ ಅಧ್ಯಕ್ಷರಾದ ಕಲಾವತಿ, ವೇಣು, ಧವನ್ ಅಪ್ಪು ಮತ್ತಿತರರು ಹಾಜರಿದ್ದರು.