ಮೈಕ್ರೋಬಯಾಲಾಜಿಸ್ಟ್ ಹಾಗೂ ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆಗೆ ನೇಮಕಾತಿ : ನೇರ ಸಂದರ್ಶನ

09/07/2020

ಮಡಿಕೇರಿ ಜು.09 : ಕೊಡಗು ಜಲ್ಲೆಯ ಕೋವಿಡ್-19 ಪ್ರಯೋಗ ಶಾಲೆಗೆ ತುರ್ತಾಗಿ ಒಬ್ಬರು ಮೈಕ್ರೋಬಯೋಲಾಜಿಸ್ಟ್ ಹಾಗೂ ಒಬ್ಬರು ಪ್ರಯೋಗಶಾಲಾ ತಂತ್ರಜ್ಞರನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು. ಮೈಕ್ರೋಬಯಾಲಾಜಿಸ್ಟ್ ಹುದ್ದೆಗೆ ಸ್ನಾತಕ್ಕೋತ್ತರ ಪದವಿ ಹಾಗೂ ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆಗೆ ಬಿ ಫಾರ್ಮಾಸಿ ಅಥವಾ ಡಿ ಫಾರ್ಮಾ ಮಾಡಿ ಪ್ಯಾರಾಮೆಡಿಕಲ್ ಬೋರ್ಡ್ ನೋಂದಣಿಯಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಜುಲೈ 13 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿಗೆ ಎಲ್ಲಾ ಮೂಲ ದಾಖಲಾತಿಯೊಂದಿಗೆ ಹಾಜರಾಗಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.