ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ : ಸುಂಟಿಕೊಪ್ಪದಲ್ಲಿ ಘಟನೆ

09/07/2020

ಸುಂಟಿಕೊಪ್ಪ,ಜು.9: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ಸುಂಟಿಕೊಪ್ಪದಲ್ಲಿ ಸೊಪ್ಪು ತರಕಾರಿ, ಎಲೆ ಹಾಗೂ ಅಡಿಕೆ ವ್ಯಾಪಾರ ಮಾಡುತ್ತಿದ್ದ ಕೃಷ್ಣ (56) ನಾಲ್ಕು ದಿನಗಳ ಹಿಂದೆ ಗೇಣಿಕೆ ಕಿರೆಸೊಪ್ಪು ತರಲೆಂದು ಕಾಡಿಗೆ ತೆರಳಿದ್ದು ನಾಪತ್ತೆಯಾಗಿದ್ದನು. ಈತನ ಪತ್ನಿ ಶಾಂತಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮದ್ಯವ್ಯಸನಿಯಾಗಿದ ಈತನ ಮೃತದೇಹ ಗುರುವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಯಾತಪ್ಪಿ ಬಿದ್ದು ಸತ್ತಿರಬಹುದೆಂದು ಶಂಕಿಸಲಾಗಿದೆ.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ.ತಿಮ್ಮಪ್ಪ ಹಾಗೂ ಎಎಸ್‍ಐ ಶ್ರೀನಿವಾಸ್ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮೃತ ದೇಹದ ಅಂತ್ಯಕ್ರಿಯೆಯನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು ನೇರವೇರಿಸಿದರು.