ಸೋಮವಾರಪೇಟೆ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ರೋಗ ನಿರೋಧಕ ಮಾತ್ರೆ ವಿತರಣೆ

10/07/2020

ಸೋಮವಾರಪೇಟೆ ಜು.10 : ಆಯುಷ್ ಇಲಾಖೆಯ ವತಿಯಿಂದ ಪಟ್ಟಣದ ಹೋಮಿಯೋಪತಿ, ಆಯುರ್ವೇದಿಕ್ ಆಸ್ಪತ್ರೆಯಲ್ಲಿ ರೋಗ ನಿರೋಧಕ ಮಾತ್ರೆಗಳನ್ನು ವಿತರಿಸಲಾಯಿತು.
ಕೋವಿಡ್-19 ವೈರಸ್ ಹರಡುತ್ತಿರುವುದರಿಂದ ಆತಂಕಗೊಂಡಿರುವ ಜನತೆ ಕಳೆದ ಎರಡು ದಿನಗಳಿಂದ ಸರದಿ ಸಾಲಿನಲ್ಲಿ ನಿಂತು ಮಾತ್ರೆ ಪಡೆದುಕೊಂಡರು.
ಕಳೆದ ಎರಡು ದಿನಗಳಿಂದ ರೋಗನಿರೋಧಕ ಶಕ್ತಿಯುಳ್ಳ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ದಿನಂಪ್ರತಿ 300 ಮಂದಿ ಮಾತ್ರೆಗಳನ್ನು ಸ್ವೀಕರಿಸುತ್ತಿದ್ದಾರೆ. ತಿಂಗಳಿಗೆ ಮೂರು ದಿನದಂತೆ ಮೂರು ತಿಂಗಳು ತೆಗೆದುಕೊಳ್ಳಬೇಕು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೌಪರ್ಣಿಕ ಹೇಳಿದರು.