ಸೋಮವಾರಪೇಟೆ ಬಸ್ ನಿಲ್ದಾಣಕ್ಕೆ ಸ್ಯಾನಿಟೈಸರ್ ವಿತರಣೆ

10/07/2020

ಸೋಮವಾರಪೇಟೆ ಜು.10 : ಏಷಿಯನ್ ಪೈಂಟ್ಸ್ ವತಿಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಸ್ಯಾನಿಟೈಸರ್ ಸ್ಟಾಂಡನ್ನು ವಿತರಿಸಲಾಯಿತು.
ಸ್ಥಳೀಯ ವಿತರಣೆಗಾರರಾದ ಎಂ.ಎಂ. ಸುರೇಶ್ ಕೊಡುಗೆ ನೀಡಿದರು. ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ಎಸ್.ಪಿ. ಪ್ರಸನ್ನ, ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ, ಪ್ರಮುಖರಾದ ರಾಜಾರಾಮ್, ಕಿಬ್ಬೆಟ್ಟ ಮಂದಣ್ಣ, ಮಿಥುನ್ ಹಾನಗಲ್, ಜನಾರ್ಧನ್, ಎಚ್.ಎ. ನಾಗರಾಜ್, ದೊರೆ, ಉಮೇಶ್, ರಫೀಕ್, ಬಸ್ ನಿಯಂತ್ರಣಾಧಿಕಾರಿ ಕೆ.ಬಿ. ಉಮೇಶ್ ಭಟ್ ಮತ್ತಿತರರು ಇದ್ದರು.