ಸುಂಟಿಕೊಪ್ಪದಲ್ಲಿ ಹಿರಿಯನಾಗರಿಕರಿಗೆ ಮಾಸ್ಕ್ ಹಾಗೂ ಸ್ವೇಟರ್ ವಿತರಣೆ

11/07/2020

ಸುಂಟಿಕೊಪ್ಪ,ಜು.11 : ಬೋಯಿಕೇರಿಯ ಹೆಲ್ಪಿಂಗ್ ಹ್ಯಾಂಡ್ ಅಸೋಶಿಯೇಷನ್ ವತಿಯಿಂದ ಗ್ರಾಮದಲ್ಲಿರುವ ಹಿರಿಯರಿಗೆ ಮಾಸ್ಕ್ ಹಾಗೂ ಸ್ವೇಟರ್‍ಗಳನ್ನು ವಿತರಿಸಲಾಯಿತು.
ಕೊಡಗು ಜಿಲ್ಲೆಯಲ್ಲಿ ಮಳೆ ಹಾಗೂ ಚಳಿ ಆರಂಭವಾಗಿದ್ದು ಬೋರಿಕೇರಿಯಲ್ಲಿ ಗ್ರಾಮದಲ್ಲಿ ನೆಲೆಸಿರುವ ಹಿರಿಯರು ಮಳೆ ಹಾಗೂ ಚಳಿಯಿಂದ ಸೊರಗದಂತೆ ಎಲ್ಲಾರಿಗೂ ಸ್ವೆಟರ್ ಹಾಗೂ ಮಾಸ್ಕ್‍ಗಳನ್ನು ಹೆಲ್ಪಿಂಗ್ ಹ್ಯಾಂಡ್ ಅಸೋಶಿಯೇಷನ್ ವತಿಯಿಂದ ಮಾತನಾಡಿದ ಕೃಷ್ಣಪ್ಪ ಹಿರಿಯರ ಆರೋಗ್ಯ ಕಾಪಾಡುವ ದಿಸೆಯಲ್ಲಿ ನಮ್ಮ ಸಂಸ್ಥೆ ವತಿಯಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಿರಿಯರು ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭ ಹೆಲ್ಪಿಂಗ್ ಹ್ಯಾಂಡ್ ಅಸೋಶಿಯೇಷನ್ ಪದಾಧಿಕಾರಿಗಳಾದ ರವಿ,ಮಹೇಶ, ದಿನೇಶ, ಪ್ರಜ್ವಲ,ತಿಮ್ಮಣ್ಣ, ಗಣಿ ಪಂಡಿತ್ ನವೀನ್ ಹಾಗೂ ಧರ್ಮ ಇದ್ದರು.