ಸಾವಿನ ಪ್ರಮಾಣ ಶೇ.2.72 ಇಳಿಕೆ

11/07/2020

ನವದೆಹಲಿ ಜು.11 : ಭಾರತದ ಕೋವಿಡ್ -19 ಪ್ರಕರಣದ ಸಾವಿನ ಪ್ರಮಾಣವು ಶೇ.2.72 ಕ್ಕೆ ಇಳಿದಿದೆ, ಇದು ಇತರ ದೇಶಗಳಿಗೆ ಹೋಲಿಸಿದರೆ ಬಹಳವೇ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಮರಣ ಪ್ರಮಾಣ ಕಡಿಮೆ ಇದೆ ಎಂದು ಸಚ್ವಾಲಯ ಪ್ರಕಟಣೆ ಹೇಳಿದೆ. ಅಲ್ಲದೆ, ಚೇತರಿಕೆ ದರದಲ್ಲಿ ಏರಿಕೆಯಾಗುವ ಪ್ರವೃತ್ತಿ ಮುಂದುವರಿದಿದ್ದು ಶುಕ್ರವಾರ ಶೇಕಡಾ 62.42 ರಷ್ಟಿದೆ. 18 ರಾಜ್ಯಗಳು ಮತ್ತುಕೇಂದ್ರಾಡಳಿತ ಪ್ರದೇಶಗಳಲ್ಲಿ ಚೇತರಿಕೆ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.
“ರಾಷ್ಟ್ರಮಟ್ಟದ ಸರಾಸರಿ ಸಾವಿನ ಪ್ರಮಾಣವು ಶೇಕಡಾ 2.72 ಕ್ಕೆ ಇಳಿದಿದೆ. ಇದು ವಿಶ್ವದ ಇತರ ದೇಶಗಳಲ್ಲಿ ಕಂಡುಬರುವ ಸಾವಿನ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಕೋವಿಡ್ -19 ನಿರ್ವಹಣೆಯಮಾದರಿಯು ಹೆಚ್ಚಿನ ಸಾವುನೋವುಗಳನ್ನು ತಗ್ಗಿಸಿದೆ “.