ತಬ್ಲಿಘಿ ಜಮಾತ್ ನ ಸದಸ್ಯರಿಗೆ ಜಾಮೀನು

July 11, 2020

ನವದೆಹಲಿ ಜು.11 : 82 ಬಾಂಗ್ಲಾದೇಶಿ ತಬ್ಲಿಘಿ ಜಮಾತ್ ನ ಸದಸ್ಯರಿಗೆ ದೆಹಲಿ ಕೋರ್ಟ್ ಜು.10 ರಂದು ಜಾಮೀನು ಮಂಜೂರು ಮಾಡಿದೆ.
ಕೋವಿಡ್-19 ಸೋಂಕು ಪ್ರಸರಣ ತಡೆಗಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ವಿಧಿಸಿದ್ದರೂ ಸಹ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಸಭೆಯಲ್ಲಿ ಭಾಗವಹಿಸುವ ಮೂಲಕ ಬಾಂಗ್ಲಾದೇಶದ ತಬಿಘಿ ಜಮಾತ್ ನ ಸದಸ್ಯರು ವೀಸಾ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದರು.
ದೆಹಲಿಯ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗುರ್ಮೊಹೀನಾ ಕೌರ್ ತಲಾ ಬಾಂಗ್ಲಾ ನಾಗರಿಕರಿಗೆ ಜಾಮೀನು ಮಂಜೂರು ಮಾಡಿದ್ದು ತಲಾ 10,000 ರೂ ವೈಯಕ್ತಿಕ ಬಾಂಡ್ ನೀಡುವಂತೆ ಸೂಚಿಸಿದ್ದಾರೆ.
ನಿಯಮ ಉಲ್ಲಂಘನೆ ಮಾಡಿದ್ದ ತಬ್ಲಿಘಿ ಜಮಾತ್ ನ ಸದಸ್ಯರ ವಿರುದ್ಧ ಪೊಲೀಸರು ಜೂನ್ ತಿಂಗಳಲ್ಲಿ ಒಟ್ಟಾರೆ 956 ವಿದೇಶಿಗರ ವಿರುದ್ಧ 59 ಚಾರ್ಜ್ ಶೀಟ್ ದಾಖಲಿಸಿದ್ದರು.

error: Content is protected !!