ಕಕ್ಕಬ್ಬೆ ಯವಕಾಪಾಡಿಯಲ್ಲಿ ಕಾಡಾನೆಗಳ ಉಪಟಳ : ಅರಣ್ಯ ವಲಯ ಕಚೇರಿ ಸ್ಥಳಾಂತರಕ್ಕೆ ಗ್ರಾಮಸ್ಥರ ಆಗ್ರಹ

July 11, 2020

ಮಡಿಕೇರಿ ಜು. 11 : ಕಕ್ಕಬ್ಬೆ ಯವಕಾಪಾಡಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ರಾತ್ರಿ ವೇಳೆ ನಾಲ್ಕುನಾಡು ಅರಮನೆ ಬಳಿಯ ಶಾಲೆಗಳ ಪಿಲ್ಲರ್‍ಗಳನ್ನು ಪುಡಿಮಾಡಿದ್ದು, ರಾಜು ಎಂಬವರ ಅಂಗಡಿ ಮತ್ತು ವಾಹನಕ್ಕೆ ಹಾನಿ ಉಂಟುಮಾಡಿದೆ.
ರಾಜನ್ ಎಂಬವರ ಮನೆ ಛಾವಣಿಗೆ ಹಾನಿ ಮಾಡಿದ್ದು, ಬೇಲಿಯ ತಂತಿಗಳನ್ನು ಕಿತ್ತು ಬಿಸಾಡಿದೆ.
ಕಕ್ಕಬ್ಬೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಭಾಗಮಂಡಲದಲ್ಲಿರುವ ಅರಣ್ಯ ವಲಯ ಕಚೇರಿಯನ್ನು ಕಕ್ಕಬ್ಬೆಗೆ ಸ್ಥಳಾಂತರಿಸಲು ಬೆಳೆಗಾರರಾದ ಪಾಂಡಂಡ ನರೇಶ್ ಆಗ್ರಹಿಸಿದ್ದಾರೆ.