ಕೋವಿಡ್ ಮೆಡಿಕಲ್ ಕಿಟ್ ಅವ್ಯವಹಾರ ಆರೋಪ : ಸಿದ್ದರಾಮಯ್ಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​ ಕಟೀಲ್ ತಿರುಗೇಟು

11/07/2020

ಮಡಿಕೇರಿ ಜು. 11 : ರಾಜ್ಯದಲ್ಲಿ ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​​ ಕಟೀಲ್ ತಿರುಗೇಟು ನೀಡಿದ್ಧಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಎಷ್ಟು ಅವ್ಯವಹಾರ ನಡೆಸಿದರು ಎನ್ನೋದು ಗೊತ್ತಿದೆ. ಮೊದಲು ಅದರ ಲೆಕ್ಕವನ್ನು ನೀಡಲ. ಈಶ್ವರ ಕಂಡ್ರೆ ಅವರು ಮನೆ ನಿರ್ಮಿಸುವಾಗ ಎಷ್ಟು ಲೂಟಿ ಹೊಡೆದರು ಎನ್ನೋದು ಗೊತ್ತಿದೆ. ಅದೆಲ್ಲವನ್ನೂ ಮೊದಲು ರಾಜ್ಯದ ಜನತೆ ಮುಂದಿಡಲಿ, ಆಮೇಲೆ ರಾಜ್ಯ ಬಿಜೆಪಿ ಸರ್ಕಾರದ ಅವ್ಯವಹಾರದ ಬಗ್ಗೆ ಮಾತನಾಡಲಿ ಎಂದರು ನಳಿನ್​​ ಕುಮಾರ್​ ಕಟೀಲ್​​ ಹೇಳಿದರು.