ಕೊಡಗಿನಲ್ಲಿ ಕಂಟೈನ್‍ಮೆಂಟ್ ಪ್ರದೇಶಗಳ ಸಂಖ್ಯೆ 61 ಕ್ಕೆ ಏರಿಕೆ

11/07/2020

ಮಡಿಕೇರಿ ಜು.11 : ಜಿಲ್ಲೆಯ ಸೋಂಕಿತರ ಪ್ರಮಾಣ ದಿನೇದಿನೇ ಹೆಚ್ಚುತ್ತಿದ್ದು, ಇದೀಗ ಕೊಡಗಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ಈ ಪೈಕಿ 62 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ 88 ಪ್ರಕರಣಗಳು ಸಕ್ರಿಯವಾಗಿದ್ದು, ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ಪ್ರದೇಶಗಳ ಸಂಖ್ಯೆಯೂ 61ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗೋಣಿಕೊಪ್ಪದ ಅಚ್ಚಪ್ಪ ಲೇಔಟ್, ಎಂ.ಎಂ.ಲೇಔಟ್, ಸೋಮವಾರಪೇಟೆ ತಾಲೂಕಿನ ನೇರಳೆ, ಹಳ್ಳದಿಣ್ಣೆ, ಬೆಸೂರು, ಬಳಗುಂದ, ಗುಡುಗಳಲೆ, ಮಡಿಕೇರಿಯ ಭಗವತಿನಗರ, ಪೊಲೀಸ್ ವಸತಿಗೃಹ, ವೀರಾಜಪೇಟೆಯ ಕೆದಮಳ್ಳೂರು ಗ್ರಾಮಗಳಲ್ಲಿ ಹೊಸದಾಗಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಸೋಮವಾರಪೇಟೆ ತಾಲೂಕಿನ ಹುಲುಸೆ ಮತ್ತು ಮಡಿಕೇರಿ ತಾಲೂಕಿನ ಕೊಳಗದಾಳು ಗ್ರಾಮಗಳನ್ನು ನಿಯಂತ್ರಿತ ಪ್ರದೇಶದಿಂದ ಮುಕ್ತಗೊಳಿಸಲಾಗಿದೆ.