ಆದೇಶ ಉಲ್ಲಂಘಿಸಿ ಪ್ರವಾಸಿಗರ ವಾಸ್ತವ್ಯ : ಮರಗೋಡು ಹೋಂಸ್ಟೇ ಮಾಲೀಕರ ವಿರುದ್ಧ ಎಫ್ ಐ ಆರ್

12/07/2020

ಮಡಿಕೇರಿ ಜು.12 : ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ನೀಡಿದ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಂ ಸ್ಟೇ ಒಂದರ ಮಾಲೀಕರು ಹಾಗೂ ಪ್ರವಾಸಿಗರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಮರಗೋಡು ಗ್ರಾಮದ ಭಾರತಿ ಎಂಬುವವರಿಗೆ ಸೇರಿದ ಹೋಂಸ್ಟೇಯಲ್ಲಿ ಮೈಸೂರು ಮೂಲದ ಪ್ರವಾಸಿಗರು ವಾಸ್ತವ್ಯ ಹೂಡಿದ್ದರೆನ್ನಲಾಗಿದೆ.
ಈ ಬಗ್ಗೆ ಮಾಹಿತಿ ದೊರೆತ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಅವರು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಅದರನ್ವಯ ಹೋಂಸ್ಟೇ ಮಾಲೀಕರು ಹಾಗೂ ಅಲ್ಲಿದ್ದ ಪ್ರವಾಸಿಗರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಪ್ರಸಕ್ತ ಹೋಂ ಸ್ಟೇಯನ್ನು ಮುಚ್ಚಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಅವರು ತಿಳಿಸಿದ್ದಾರೆ.