ಸೋಮವಾರಪೇಟೆಯಲ್ಲಿ ಭಾನುವಾರದ ಲಾಕ್ ಡೌನ್ ಸಂಪೂರ್ಣ

July 12, 2020

ಸೋಮವಾರಪೇಟೆ ಜು.12 : ರಾಜ್ಯ ಸರ್ಕಾರ ಭಾನುವಾರ ಪೂರ್ತಿ ದಿನ ಲಾಕ್‍ಡೌನ್ ಹೇರಿದ್ದ ಹಿನ್ನಲೆಯಲ್ಲಿ ಪಟ್ಟಣದ ವರ್ತಕರು ಹಾಗೂ ಜನರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಭಾನುವಾರ ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಅಗತ್ಯವಾದ ಹಾಲು, ದಿನಪ್ರತಿಕೆ, ಪೆಟ್ರೋಲ್ ಹಾಗೂ ಔಷಧಿ ಅಂಗಡಿಗಳು ಮಾತ್ರ ತೆರೆದಿದ್ದವು.
ಭಯಭೀತರಾದ ಜನರು: ಪಟ್ಟಣದಲ್ಲಿ ಮೂರು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬ್ಯಾಂಕ್ ಒಂದರಲ್ಲಿ ನಿನ್ನೆ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪಟ್ಟಣದ ಜನರು ಭಯಭೀರಾಗಿದ್ದಾರೆ. ಬ್ಯಾಂಕಿಗೆ ಬಂದಿದ್ದ ಗ್ರಾಹಕರೊಬ್ಬರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ, ಕಳೆದ ಒಂಬತ್ತು ದಿನಗಳ ಹಿಂದೆಯೇ ಸಿಬ್ಬಂದಿಯೊಬ್ಬರು ಸ್ವಯಂ ಪ್ರೇರಿತರಾಗಿ ಸ್ವಾಬ್ ಪರೀಕ್ಷೆಗೆ ನೀಡಿದ್ದರು. ಆದರೆ, ಅದು 9 ದಿನಗಳ ನಂತರ ಶನಿವಾರ ರಿಪೋರ್ಟ್ ಬಂದಿದ್ದು, ಇಬ್ಬರು ಸಿಬ್ಬಂದಿಗಳಿಗೆ ಪಾಸಿಟಿವ್ ಎಂದಿದೆ. ಅದಾಗಲೇ ಬ್ಯಾಂಕ್ ಸಿಬ್ಬಂದಿ ಪಟ್ಟಣದ ಅನೇಕ ಅಂಗಡಿಗಳಲ್ಲಿ ಬ್ಯಾಂಕಿನ ಕೆಲಸಕ್ಕಾಗಿ ಸಂಪರ್ಕಿಸಿದ್ದರು. ಅಲ್ಲದೆ. ಅದೇ ಬ್ಯಾಂಕಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಮೂವರು ಪಿಗ್ಮಿ ಸಿಬ್ಬಂದಿಗಳು ಪಟ್ಟಣದೆಲ್ಲೆಡೆಗಳಲ್ಲಿ ಹಣ ಸಂಗ್ರಹಿಸಿದ್ದಾರೆ. ಇದರಿಂದಾಗಿ ಪಟ್ಟಣದೆಲ್ಲೆಡೆ ಜನರು ಭಯಗೊಂಡಿದ್ದಾರೆ.

error: Content is protected !!