ನಿಯಮ ಮೀರಿ ಸೋಮವಾರಪೇಟೆ ಸಂತೆ ನಡೆದರೆ ಕಠಿಣ ಕ್ರಮ : ಮುಖ್ಯಾಧಿಕಾರಿ ಎಚ್ಚರಿಕೆ

12/07/2020

ಸೋಮವಾರಪೇಟೆ ಜು.12 : ಪಟ್ಟಣದಲ್ಲಿ ಶನಿವಾರ ಮೂರು ಮಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಭಾನುವಾರ ಬ್ಯಾಂಕ್ ಕಟ್ಟಡವನ್ನು ಸ್ಯಾನಿಟೈಸ್ ಹಾಗೂ ವಲ್ಲಭಬಾಯಿ ರಸ್ತೆ ಹಾಗೂ ಹಳ್ಳ ದಿಣ್ಣೆ ಗ್ರಾಮವನ್ನು ಸೀಲ್‍ಡೌನ್ ಮಾಡಲಾಯಿತು.
ಪಟ್ಟಣದಲ್ಲಿ ಕರೋನಾ ಭೀತಿಯ ನಡುವೆ ಹಿಂದಿನ ವಾರ ಸವಿತಾ ಸಮಾಜದವರು ಅಂಗಡಿಗಳನ್ನು ಮುಚ್ಚಿ, ಎರಡು ದಿನಗಳ ಹಿಂದೆಯಷ್ಟೆ ತೆರೆದಿದ್ದರು. ಆದರೆ, ನಿನ್ನೆ ಮೂವರಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪಟ್ಟಣದಲ್ಲಿ ಸವಿತಾ ಸಮಾಜದ ಅಂಗಡಿಗಳನ್ನು ಜು. 28ರ ತನಕ ಮುಚ್ಚಲು ಭಾನುವಾರ ನಡೆದ ಸಂಘದ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಸಂಘದ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದ್ದಾರೆ.
ಕಳೆದ ಮೂರು ವಾರಗಳಿಂದ ಸೋಮವಾರ ನಡೆಯುವ ಸಂತೆಯನ್ನು ಜಿಲ್ಲಾಡಳಿತ ರದ್ಧುಗೊಳಿಸಿತ್ತು. ಈಗ ಅದನ್ನು ಜುಲೈ ತಿಂಗಳ ಅಂತ್ಯದವರೆಗೆ ಮುಂದೂಡಲಾಗಿದೆ. ಮಾರುಕಟ್ಟೆ ಆವರಣಕ್ಕೆ ಪ್ರವೇಶವನ್ನು ನಿರ್ಭಂದಿಸಲಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಯಾರೂ ಮಾರಾಟಕ್ಕೆ ಬರಬಾರದು. ಆದೇಶ ಮೀರಿ ಅಂಗಡಿ ಹಾಕಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.