ಸುಂಟಿಕೊಪ್ಪದ ಸೋಂಕಿತ ಬಾಲಕಿ ಮನೆಯವರಿಗೆ ಧೈರ್ಯ ತುಂಬಿದ ಅಧಿಕಾರಿಗಳು

July 12, 2020

ಸುಂಟಿಕೊಪ್ಪ ಜು.12 : ಸುಂಟಿಕೊಪ್ಪದ ಬಾಲಕಿಯೋರ್ವಳಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ 2ನೇ ವಿಭಾಗದ ಅಪ್ಪಾರಂಡ ಬಡಾವಣೆಯಲ್ಲಿ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ತಹಶೀಲ್ದಾರ್ ಗೋವಿಂದರಾಜು, ಕಂದಾಯ ಪರಿವೀಕ್ಷಕ ಶಿವಪ್ಪ ಆರೋಗ್ಯ ಸಹಾಯಕ ಚಂದ್ರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಠಾಣಾಧಿಕಾರಿ ತಿಮ್ಮಪ್ಪ, ಗ್ರಾ.ಪಂ.ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಜಿ.ಪಂ ಸದಸ್ಯ ಪಿ.ಎಂ.ಲತೀಫ್ ಇವರುಗಳು ಅಪ್ಪಾರಂಡ ಬಡಾವಣೆಗೆ ತೆರಳಿ ಸೋಂಕು ತಗುಲಿದ ಬಾಲಕಿಯ ಮನೆಯವರಿಗೆ ಧೈರ್ಯ ತುಂಬಿದರು.
ಬಡಾವಣೆಯ 64 ಮನೆಯನ್ನು ಸೀಲ್ ಡೌನ್ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ತೀಫ್ ಅವರು ಇಲ್ಲಿನ ನಿವಾಸಿಗಳಿಗೆ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ತಿಳಿಸಿದರು.

error: Content is protected !!