ಕೂಡಿಗೆ ಸೈನಿಕ ಶಾಲೆ ನೂತನ ಪ್ರಾಂಶುಪಾಲರಾಗಿ ಕರ್ನಲ್ ಜಿ ಕಣ್ಣನ್ ನೇಮಕ

12/07/2020

ಕುಶಾಲನಗರ ಜು.12 : ಕೂಡಿಗೆ ಸೈನಿಕ ಶಾಲೆ ನೂತನ ಪ್ರಾಂಶುಪಾಲರಾಗಿ ಕರ್ನಲ್ ಜಿ ಕಣ್ಣನ್ ನೇಮಿಸಲಾಗಿದೆÉ.
ಶಾಲೆಯ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ ಅವರಿಂದ ನೂತನ ಪ್ರಾಂಶುಪಾಲರು ಅಧಿಕಾರ ವಹಿಸಿಕೊಂಡರು.
ಶಾಲೆಯ ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಆರ್ ಕೆ ಡೇ, ಹಿರಿಯ ಶಿಕ್ಷಕರಾದ ಎಸ್ ಸೂರ್ಯನಾರಾಯಣ, ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಕರ್ನಲ್ ಜಿ ಕಣ್ಣನ್ ಅವರು ಪ್ರಾಂಶುಪಾಲ ರಕ್ಷಣಾ ಇಲಾಖೆಯ ಹಲವಾರು ಪ್ರತಿಷ್ಠಿತ ತರಬೇತಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದು ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ವೈಸ್‍ಚೀಫ್ ಆಫ್ ಸ್ಟಾಫ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.