ಅಂತಿಮ ವರ್ಷದ ಪದವಿ ಪರೀಕ್ಷೆ ರದ್ದುಗೊಳಿಸಿ: ಜಿಲ್ಲಾ ಎಸ್.ಎಸ್.ಯು‌.ಐ ಆಗ್ರಹ

13/07/2020

ಮಡಿಕೇರಿ ಜು.13 :ಅಂತಿಮ ವರ್ಷದ ಪದವಿ , ಇಂಜಿನಿಯರಿಂಗ್, ಹಾಗೂ ಡಿಪ್ಲೊಮಾ ಪರೀಕ್ಷೆಗಳನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಇಂಟರ್ನೆಲ್ ಅಂಕದ ಆಧಾರದಲ್ಲಿ ಉತ್ತೀರ್ಣ ಮಾಡಬೇಕೆಂದು ಜಿಲ್ಲಾ‌ ಎಸ್.ಎಸ್.ಯು.ಐ ಉಪಾಧ್ಯಕ್ಷ ರಾಶಿದ್ ಅಯ್ಯಂಗೇರಿ ಸರ್ಕಾರಕ್ಕೆ ‌ ಒತ್ತಾಯಿಸಿದ್ದಾರೆ..

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ರಾಶಿದ್ ಈಗಾಗಲೇ ಸರ್ಕಾರ ಮೊದಲ ಹಾಗೂ ದ್ವಿತೀಯ ವರ್ಷದ ಎಲ್ಲಾ ಪದವಿ ಪರೀಕ್ಷೆಗಳು ರದ್ದುಗೊಳಿಸಿ,ವಿದ್ಯಾರ್ಥಿಗಳನ್ನು ಆಂತರಿಕ ಅಂಕದ ಆಧಾರದ ಮೇಲೆ ಉತ್ತೀರ್ಣ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದೆ.
ಈಗಾಗಲೇ ಯು.ಜಿ.ಸಿ ಮಾರ್ಗಸೂಚಿಯಂತೆ ಅಂತಿಮ‌ ಪದವಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲು ಸರ್ಕಾರ ಎಲ್ಲಾ ವಿ.ವಿಗಳಿಗೆ ಸೂಚನೆ ನೀಡಿದೆ.

ದೇಶ ,ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ.ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಕೊರೊನಾ ದುಪ್ಪಟ್ಟಾಗುವ ಸಾಧ್ಯತೆಗಳಿವೆ ಎಂದು ಸ್ವತಹ ಸರ್ಕಾರದ ಪ್ರತಿನಿಧಿಗಳೇ ಹೇಳುತ್ತಿದ್ದಾರೆ.
ಈ ಸಂಕಷ್ಟ ಸನ್ನಿವೇಶದಲ್ಲಿ ಸರ್ಕಾರ ಎಲ್ಲಾ ಅಂತಿಮ ಪದವಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಉತ್ತೀರ್ಣಮಾಡಬೇಕೆಂದು ರಾಶಿದ್ ಹೇಳಿದರು.

ದೆಹಲಿಯಲ್ಲಿ ಆಡಳಿತ ಸರ್ಕಾರ ಎಲ್ಲಾ ವಿವಿಗಳ ಪರೀಕ್ಷೆಯನ್ನು ರದ್ದುಗೊಳಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿದ್ದಾರೆ.
ಇದೇ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು.ವಿದ್ಯಾರ್ಥಿಗಳ ಜೀವದೊಂದಿಗೆ ಸರ್ಕಾರ ಚೆಲ್ಲಾಟವಾಡಬಾರದು ಎಂದು ರಾಶಿದ್ ಮನವಿ ಮಾಡಿದರು.

ಎನ್.ಎಸ್.ಯು.ಐ ವಿದ್ಯಾರ್ಥಿಗಳ‌ ಪರವಾಗಿ ಹೋರಾಡುತ್ತಾ ಬಂದ ವಿದ್ಯಾರ್ಥಿ ಸಂಘಟನೆಯಾಗಿದ್ದು, ಅಂತಿ ವರ್ಷದ ಪದವಿ ವಿದ್ಯಾರ್ಥಿಗಳ ಪರವಾಗಿ ಜಿಲ್ಲಾ ಎನ್.ಎಸ್.ಯು.ಐ ಸರ್ಕಾರಕ್ಕೆ ಮನವಿ‌ ಪತ್ರ ಸಲ್ಲಿಸಲಾಗುವುದೆಂದು ಜಿಲ್ಲಾ ಎನ್.ಎಸ್.ಯು.ಐ ಉಪಾಧ್ಯಕ್ಷ ರಾಶಿದ್ ಅಯ್ಯಂಗೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.