30 ಕೈದಿಗಳನ್ನು ಕಾಡಿದ ಕೊರೋನಾ

July 13, 2020

ಬೆಂಗಳೂರು ಜು.13 : ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕೇವಲ ಪೊಲೀಸರಷ್ಟೇ ಅಲ್ಲ, ಅಪರಾಧ ಮಾಡಿ ಜೈಲು ಸೇರಿರುವ ಕೈದಿಗಳಿಗೂ ಮಹಾಮಾರಿಯಾಗಿ ವ್ಯಾಪಿಸಿದೆ.
ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸುಮಾರು 400 ವಿಚಾರಣಾಧೀನ ಕೈದಿಗಳ ಪೈಕಿ 150 ಮಂದಿಗೆ ರ್ಯಾಂಡಮ್ ಟೆಸ್ಟ್ ಮಾಡಿದ್ದ ವೇಳೆ 30ಮಂದಿಗೆ ಕೊರೋನಾ ಇರುವುದು ಖಚಿತವಾಗಿದೆ. ಇದೀಗ ಸೋಂಕಿತ ಕೈದಿಗಳನ್ನು ಪ್ರತ್ಯೇಕ ಐಸೋಲೇಟೆಡ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಅವರಿದ್ದ ಜೈಲಿನ ಭಾಗಗಳನ್ನು ಸ್ಯಾನಿಟ್ರೇಷನ್ ಮಾಡಲಾಗುತ್ತಿದೆ.
ಇನ್ನು ಕಳೆದ ವಾರವೂ ಪರಪ್ಪನ ಅಗ್ರಹಾರ ಜೈಲಿನ 20 ವಿಚಾರಣಾಧೀನ ಕೈದಿಗಳಿಗೆ ಕೊರೋನಾ ಇರುವುದು ಪತ್ತೆಯಾಗಿತ್ತು. ಇದೀಗ ಮತ್ತೆ ಮೂವತ್ತು ಕೈದಿಗಳಿಗೆ ಸೋಂಕು ತಗುಲಿರುವುದು ಜೈಲಿನ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.

error: Content is protected !!