ಮಂಗಳೂರು ಪಾಲಿಕೆ ಆಯುಕ್ತರಿಗೆ ಸೋಂಕು

13/07/2020

ಮಂಗಳೂರು ಜು.13 : ಮಂಗಳೂರು ನಗರ ಪಾಲಿಕೆಯ ಆಯುಕ್ತರಿಗೆ ಕೊರೋನಾ ಸೋಂಕಿರುವುದು ಖಚಿತವಾಗಿದೆ. ಜುಲೈ 12 ರ ಭಾನುವಾರ ಆಯುಕ್ತರಿಗೆ ಕೊರೋನಾ ಇರುವುದು ದೃಢವಾಗಿದೆ.
ಎರಡು ದಿನಗಳ ಹಿಂದೆ ಆಯುಕ್ತರಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ನಂತರ ಅವರ ಗಂಟಲ ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಯಿತು. ಇಂದು ಅದರ ವರದಿ ಬಂದಿದ್ದು ವರದಿಯಲ್ಲಿಅವರಿಗೆ ಕೊರೋನಾವೈರಸ್ ಸೋಂಕು ಇರುವುದು ದೃಢವಾಗಿದೆ.
ಎಂಸಿಸಿ ಆಯುಕ್ತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ಹೇಳಿದೆ.