ವಿರಾಜಪೇಟೆ ಪೊಲೀಸ್ ಸಹಾಯ ಕೇಂದ್ರ ಆರಂಭ

July 13, 2020

ಮಡಿಕೇರಿ ಜು.13 : ಕೊರೋನಾ ಸೋಂಕು ಜಿಲ್ಲೆಯಾದ್ಯಾಂತ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಪೊಲೀಸ್ ಠಾಣೆಗಳ ಸಮುಚ್ಚಯದಲ್ಲಿ ಪೊಲೀಸ್ ಸಹಾಯಕೇಂದ್ರಕ್ಕೆ ಚಾಲನೆ ನೀಡಲಾಗಿದೆ.
ಠಾಣಾ ಕಛೇರಿಗಳಿಗೆ ಪ್ರವೇಶ ಮಾಡುವ ಮತ್ತು ಪೊಲೀಸು ಸಿಬ್ಬಂದಿಗಳ ವಸತಿಗೃಹಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಸಹಾಯ ಕೇಂದ್ರದಲ್ಲಿ ಸ್ಕ್ರೀನಿಂಗ್ ಮತ್ತು ಸೇನಿಟೈಸರ್ ಬಳಕೆ ಮಾಡಲಾಗುವುದು. ನಂತರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಸಾರ್ವಜನಿಕರು ಸಹಾಯಕೇಂದ್ರಕ್ಕೆ ಮೊದಲು ಭೇಟಿ ನೀಡಿ ಮಾಹಿತಿ ನೀಡಬೇಕು. ದೂರುಗಳನ್ನು ಸಹಾಯ ಕೇಂದ್ರದಲ್ಲೇ ಪಡೆದು ನಂತರದಲ್ಲಿ ದೂರುಗಳನ್ನು ವಿಂಗಡಿಸಿ ಠಾಣೆಗಳಿಗೆ ನೀಡಲಾಗುತ್ತದೆ.

error: Content is protected !!