ಮರಳಿ ಗೂಡಿಗೆ ಸಾಂತ್ವನ ಕಾರ್ಯಕ್ರಮ : ಯು.ಎ.ಇ‌ ಯಿಂದ ಬೆಂಗಳೂರು ತಲುಪಿದ ಎರಡನೇ ವಿಮಾನ: ಮರಳಿ‌ ತಾಯ್ನಾಡು ತಲುಪಿದ 175 ಕನ್ನಡಿಗರು

13/07/2020

ಮಡಿಕೇರಿ ಜು. 13 : ಕರ್ನಾಟಕ ರಾಜ್ಯ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಜಿ.ಸಿ.ಸಿ ಘಟಕ ಕೊಡಗು” ಮರಳಿ ಗೂಡಿಗೆ ಸಾಂತ್ವನ ” ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ ಕಾರ್ಯಕ್ರಮವು ಬಳಹ ಯಶಸ್ವಿಯಾಗಿ ನಡೆಯುತ್ತಿದ್ದು. ಕಳೆದ ವಾರ 168 ಕನ್ನಡಿಗರು ಯು.ಎ.ಇ ಯಿಂದ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದರು. 175ಕನ್ನಡಿಗರನ್ನೊಳಗೊಂಡ ಎರಡನೇ ವಿಮಾನವು ಇದೀಗ ಯು‌.ಎ.ಇ ಯಿಂದ, ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿದೆ.

ಯು.ಎ.ಇ ರಾಸಲ್ ಕೈಮ ವಿಮಾನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಸಿ.ಸಿ ಕೊಡಗು ಘಟಕದ ಅಧ್ಯಕ್ಷ ಹುಸೈನ್ ಫೈಝಿ ವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಅವರು ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರಿಗೆ ಎಸ್.ಕೆ.ಎಸ್.ಎಸ್‌.ಎಫ್ ಹಾಗೂ ಜಿಸಿಸಿ ಕೊಡಗು ಘಟಕ ಆಸರೆಯಾಗಿ, ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಾ ಬಂದಿದ್ದೇವೆ ಎಂದು ಹುಸೈನ್ ಫೈಝಿ ಹೇಳಿದರು.
ತಾಯ್ನಾಡಿಗೆ ಮರಳಲು ಬಯಸಿದ ಅನಿವಾಸಿ ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸಿ, ಇಂದು ಯು.ಎ.ಇ ಯಿಂದ ಬೆಂಗಳೂರಿಗೆ ಎರಡನೇ ವಿಮಾನವನ್ನು ಏರ್ಪಡಿಸಿದ್ದೇವೆ.
175 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ. ಎಲ್ಲೆಡೆ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಪ್ರಯಾಣಿಕರು ಸರ್ಕಾರದ ಎಲ್ಲಾ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ನಮ್ಮ ಯಶಸ್ವಿಗೆ ಕೈ ಜೋಡಿಸಬೇಕಾಗಿ ಹುಸೈನ್ ಫೈಝಿ ಮನವಿ ಮಾಡಿದರು.
ಅಬುಧಾಬಿಯಿಂದ ರಾಸಲ್ ಕೈಮಾ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆ ಹಾಗೂ ಇನ್ನಿತರ ಸೌಲಭ್ಯ ಗಳನ್ನು ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಸದಸ್ಯ ಯಹ್ಯಾ ಕೊಡ್ಲಿಪೇಟೆ ಅವರ ನೇತೃತ್ವದಲ್ಲಿ ಮಾಡಿಕೊಡಲಾಗಿತ್ತು.

ಈ‌ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ನೇತಾರ ಶಾಫಿ ಪೆರುವಾಯಿ, ಮೀಡಿಯಾ ವಿಂಗ್ ಸದಸ್ಯ ಅಬ್ದುಲ್ ರಜಾಕ್, ಇರ್ಷಾದ್ ಕೂಡಿಗೆ, ರಫೀಕ್ ಕುಂಜಿಲ, ಮೀಡಿಯಾ ವಿಂಗ್ ಚೇರ್ಮೇನ್ ಶಫೀಕ್ ನೆಲ್ಲಿಹುದಿಕೇರಿ,ಬಷೀರ್ ಚೇರಂಬಾಣೆ, ರಶೀದ್ ವಾಲ್ನೂರು ತ್ಯಾಗತ್ತೂರು, ಕಮರುದ್ದೀನ್ ಸೌದಿ, ರಜಾಕ್ ಫೈಝಿ,ಶಿಯಾಬ್, ಗಫೂರ್ ಹಾಗೂ ಎಸ್.ಕೆ.ಎಸ್.ಎಫ್.ವಿಖಾಯ ಸದಸ್ಯರು, ಹಾಗೂ ಜಿಸಿಸಿ ಕೊಡಗು ಘಟಕದ ಸದಸ್ಯರು ಇದ್ದರು.