ಜು.14 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

13/07/2020

ಬೆಂಗಳೂರು ಜು. 13 : ರಾಜ್ಯದಲ್ಲಿ ನಾಳೆ ( ಜು.14) ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ನಾಳೆ  ಬೆಳಿಗ್ಗೆ 11 ಗಂಟೆಗೆ ಪರೀಕ್ಷೆ ಫಲಿತಾಂಶ ಬಿಡುಗಡೆಯಾಲಿದೆ. ಫಲಿತಾಂಶದ ಮಾಹಿತಿಯನ್ನು  ವಿದ್ಯಾರ್ಥಿಗಳು ಅಥವಾ ಅವರ ಪಾಲಕರ ಮೊಬೈಲ್  ಗೆ ಎಸ್ ಎಂ ಎಸ್ ಮೂಲಕ ಕಳುಹಿಸಿಕೊಡಲಾಗುವುದು ಎಂದರು.

ಕೋವಿಡ್ 19 ಸೋಂಕು ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳು ಅಥವಾ ಪಾಲಕರು ಕಾಲೇಜಿಗೆ ಭೇಟಿ ನೀಡುವುದು ಬೇಡ. ಎಸ್ ಎಂಎಸ್ ಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಸಚಿವರು ಮನವಿ ಮಾಡಿದರು.