ಜು. 15 ರಂದು ಆಕಾಶವಾಣಿಯಲ್ಲಿ ಕಾಮೇಗೌಡರ ಕಾರ್ಯಕ್ರಮ
13/07/2020

ಮಡಿಕೇರಿ ಜು.13 : ಮಡಿಕೇರಿ ಆಕಾಶವಾಣಿ ಮೂಲಕ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕಾಮೇಗೌಡರ ಕೆರೆಗಳ ನಿರ್ಮಾಣ ಕುರಿತ ಸಂಯೋಜಿತ ಕಾರ್ಯಕ್ರಮವು ಜುಲೈ, 15 ರಂದು ಸಂಜೆ 6:55ಕ್ಕೆ ಕೃಷಿರಂಗದಲ್ಲಿ ಪ್ರಸಾರವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೂನ್ 28ರ ಮನ್‍ಕಿ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಕಾಯಕ ಕುರಿತು ವಿಶೇಷವಾಗಿ ಉಲ್ಲೇಖ ಮಾಡಿದ್ದರು. 16 ಕೆರೆಗಳನ್ನು ಕಟ್ಟಲು ಕಳೆದ 40 ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿ ಅವಿರತವಾಗಿ ಕಾಮೇಗೌಡರು ಶ್ರಮಪಟ್ಟಿದ್ದಾರೆ. ಆಕಾಶವಾಣಿಯ ಕಾರ್ಯಕ್ರಮದಲ್ಲಿ ಇವರ ಹಿರಿಯ ಪುತ್ರ ಕೃಷ್ಣ ಅವರು ಮಾತನಾಡಿದ್ದಾರೆ ಎಂದು ಕಾರ್ಯಕ್ರಮ ನಿರ್ವಾಹಕರಾದ ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.
