ರಕ್ತದಾನ ಮಾಡಿ ಮಾದರಿಯಾದ ಸೋಮವಾರಪೇಟೆ ಯುವ ಸಮೂಹ

13/07/2020

ಸೋಮವಾರಪೇಟೆ ಜು.13 : ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಯೋಧಾಭಿಮಾನಿ ಬಳಗ-ಹಾನಗಲ್ಲುಬಾಣೆ ಇವುಗಳ ಆಶ್ರಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಉಚಿತ ರಕ್ತದಾನ ಶಿಬಿರ ನಡೆಯಿತು.
ಶಿಬಿರಕ್ಕೆ ಚಾಲನೆ ನೀಡಿದ ವೈದ್ಯಾಧಿಕಾರಿ ಶಿವಪ್ರಸಾದ್ ಮಾತನಾಡಿ, ಕೊರೊನಾ ವೈರಸ್ ಆತಂಕದ ಸಂದರ್ಭದಲ್ಲೂ ಸಾಮಾಜಿಕ ಕಳಕಳಿಯೊಂದಿಗೆ ರಕ್ತದಾನ ಮಾಡುತ್ತಿರುವದು ಶ್ಲಾಘನೀಯ. ಆರೋಗ್ಯವಂತ ವ್ಯಕ್ತಿಗಳು ನಿಯಮಿತವಾಗಿ ರಕ್ತದಾನ ಮಾಡಬೇಕು. ಇಂತಹ ಶಿಬಿರಗಳು ಹೆಚ್ಚು ನಡೆಯಬೇಕು ಎಂದು ಆಶಿಸಿದರು.
ಜಿಲ್ಲಾ ರಕ್ತನಿಧಿ ಘಟಕದ ಕರುಂಬಯ್ಯ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು, ಆರೋಗ್ಯವಂತ ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಬೇಕು. ಸಂಘ ಸಂಸ್ಥೆಗಳ ಪದಾಧಕಾರಿಗಳು ರಕ್ತದಾನಕ್ಕಾಗಿ ನಮ್ಮೊಂದಿಗೆ ಕೈಜೋಡಿಸುತ್ತಿದ್ದು, ಇನ್ನೂ ಹೆಚ್ಚಿನ ಸ್ಪಂದನೆಯ ಅಗತ್ಯವಿದೆ ಎಂದರು.
ಶಿಬಿರದಲ್ಲಿ ಒಟ್ಟು 46 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು. ಈ ಸಂದರ್ಭ ಕರವೇ ತಾಲೂಕು ಅಧ್ಯಕ್ಷ ಕೆ.ಎನ್.ದೀಪಕ್, ಯೋಧಾಭಿಮಾನಿ ಬಳಗದ ಕೃಷ್ಣ ಮತ್ತಿತರರು ಇದ್ದರು.