ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 196ಕ್ಕೆ ಏರಿಕೆ

14/07/2020

ಕೊಡಗು ಜಿಲ್ಲೆಯಲ್ಲಿ ಇಂದು ಹೊಸದಾಗಿ 12 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 196ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಮಡಿಕೇರಿ ಪಟ್ಟಣದ ಐ.ಟಿ.ಐ ಜಂಕ್ಷನ್ ಬಳಿ ವಾಸವಿರುವ, ಬಾಗಲಕೋಟೆ ಪ್ರಯಾಣದ ಇತಿಹಾಸ ಇರುವ ಪೊಲೀಸ್ ಇಲಾಖೆಯ 32 ವರ್ಷದ ಪುರುಷ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕು, ಗೋಣಿಕೊಪ್ಪದ ಹೆಚ್.ಸಿ.ಪುರದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 37 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ತಾಲ್ಲೂಕು, ಕರಡಿಗೋಡು ನಿವಾಸಿ ಕೇರಳದ ಕಣ್ಣೂರು ಪ್ರಯಾಣದ ಇತಿಹಾಸವಿರುವ 56 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.ಸೋಮವಾರಪೇಟೆ ತಾಲ್ಲೂಕು, ನೆಲ್ಲಿಹುದಿಕೇರಿ, ಮಾದಪ್ಪ ಕಾಲೋನಿ ನಿವಾಸಿ 58 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಪಿರಿಯಾಪಟ್ಟಣ ತಾಲ್ಲೂಕು, ಚೆನ್ನಕಲ್ ಕೊಪ್ಪ ಗ್ರಾಮದ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 15 ವರ್ಷದ ಹುಡುಗನಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು, ಕುಶಾಲನಗರದ ದಂಡಿನಪೇಟೆಯ (ಕುಸುಮ ಸ್ಟೋರ್ ಬಳಿ) ನಿವಾಸಿ, ಜ್ವರ ಲಕ್ಷಣಗಳಿದ್ದ 22 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ತಾಲ್ಲೂಕು, ಕುಶಾಲನಗರದ ದಂಡಿನಪೇಟೆಯ (ರೋಟರಿ ಹಾಲ್ ಬಳಿ) ನಿವಾಸಿ, 48 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕು, ಕುಶಾಲನಗರದ ಕೂಡ್ಲೂರು ನಿವಾಸಿ ಉಕ್ರೈನ್ ನಿಂದ ಹಿಂದಿರುಗಿದ್ದ 18 ವರ್ಷದ ಹುಡುಗನೊಬ್ಬನಿಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ತೊರೆನೂರು ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 25 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕು 1ನೇ ರುದ್ರಗುಪ್ಪೆ (ತೋತೇರಿ) ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 38 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ತೊರೆನೂರು ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 25 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ಪಟ್ಟಣದ ಪುಟಾಣಿ ನಗರ ನಿವಾಸಿ, ಮಂಗಳೂರಿನಿಂದ ಹಿಂದಿರುಗಿದ್ದ 54 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಹೊಸದಾಗಿ 7 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ. ವಿರಾಜಪೇಟೆ ತಾಲ್ಲೂಕಿನ ಸಿದ್ಧಾಪುರದ ಕರಡಿಗೋಡು, ಮಡಿಕೇರಿಯ ಐ.ಟಿ.ಐ ಜಂಕ್ಷನ್,ಸೋಮವಾರಪೇಟೆ ತಾಲ್ಲೂಕಿನ ಮಾದಪ್ಪ ಕಾಲೋನಿ, ನೆಲ್ಲಿಹುದಿಕೇರಿ, ಕುಶಾಲನಗರದ ದಂಡಿನಪೇಟೆ (ಕುಸುಮ ಸ್ಟೋರ್ ಬಳಿ),ದಂಡಿನಪೇಟೆ (ರೋಟರಿ ಹಾಲ್ ಬಳಿ),ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಕೂಡ್ಲೂರು,ವಿರಾಜಪೇಟೆ ತಾಲ್ಲೂಕಿನ 1ನೇ ರುದ್ರಗುಪ್ಪೆ (ತೋತೇರಿ).

ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹುಂಡಿ ಗ್ರಾಮದಲ್ಲಿ ತೆರೆಯಲಾಗಿದ್ದ ನಿಯಂತ್ರಿತ ಪ್ರದೇಶವನ್ನು ಸಾರ್ವನಿಕರಿಗೆ ಮುಕ್ತಗೊಳಿಸಲಾಗಿದೆ.

ಜಿಲ್ಲೆಯ ಒಟ್ಟು ಒಟ್ಟು ಸೋಂಕಿತ ಪ್ರಕರಣಗಳು 196. ಒಟ್ಟು ಬಿಡುಗಡೆಗೊಂಡ ಪ್ರಕರಣಗಳು 69, ಒಟ್ಟು ಸಕ್ರಿಯ ಪ್ರಕರಣಗಳು 124, ಒಟ್ಟು ಮೃತಪಟ್ಟ ಪ್ರಕರಣಗಳು 3, ಒಟ್ಟು ನಿಯಂತ್ರಿತ ಪ್ರದೇಶಗಳು 83 ಆಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.