ಮರಳಿ ಗೂಡಿಗೆ ಸಾಂತ್ವನ ಕಾರ್ಯಕ್ರಮ : ರಿಯಾದ್ ನಿಂದ ಬೆಂಗಳೂರು ತಲುಪಿದ ಮೊದಲ ವಿಮಾನ : ಕೊಡಗಿನ ನಿವಾಸಿಗಳು ಸೇರಿ ಒಟ್ಟು 175ಮಂದಿ ತಾಯ್ನಾಡಿಗೆ

14/07/2020

ಮಡಿಕೇರಿ ಜು. 14 : ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಘಟಕ ಕೊಡಗು ವತಿಯಿಂದ ಹಮ್ಮಿಕೊಂಡಿರುವ ” ಮರಳಿ ಗೂಡಿಗೆ” ಸಾಂತ್ವನ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಸಾಧಿಸಿದೆ.ಜಿಸಿಸಿ ಕೊಡಗು ಘಟಕದ ವತಿಯಿಂದ ಯು.ಎ.ಇ ಯಿಂದ‌ ಎರಡು ವಿಮಾನ ಯಶಸ್ವಿಯಾಗಿ ಬೆಂಗಳೂರು ತಲುಪಿದೆ.
ಮರಳಿ ಗೂಡಿಗೆ ಸಾಂತ್ವನ ಕಾರ್ಯಕ್ರಮವು ಇದೀಗ ಸೌದಿ ಅರೇಬಿಯಾಗೂ ವಿಸ್ತರಣೆ ಮಾಡಿ” ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ ವಿನೂತನ ಕಾರ್ಯಕ್ರಮದಲ್ಲಿ ಸೌದಿ ರಿಯಾದ್ ನಿಂದ ಬೆಂಗಳೂರಿಗೆ , ಎಸ್‌.ಕೆ.ಎಸ್.ಎಸ್‌.ಎಫ್ ಪ್ರಯಾಣಿಕರು ಸೇರಿ 175 ಕನ್ನಡಿಗರನ್ನೊಳಗೊಂಡ ಮೊದಲ ವಿಮಾನವು ಇದೀಗ ಬೆಂಗಳೂರಿಗೆ ಯಶಸ್ವಿಯಾಗಿ ತಲುಪಿದೆ.
ರಿಯಾದ್ ವಿಮಾನ‌‌ ನಿಲ್ದಾಣದಲ್ಲಿ  ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಸಿಸಿ ಕೊಡಗು ಪ್ರಮುಖ ರಜಾಕ್  ಫೈಝಿ ವಹಿಸಿದ್ದರು.ಈ ಸಂದರ್ಭದ‌ ಮಾತನಾಡಿದ ಅವರು ಯು.ಎ.ಇ ಯಿಂದ ಬೆಂಗಳೂರಿಗೆ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಜಿ.ಸಿಸಿ‌ ಕೊಡಗು ಘಟಕದಿಂದ ಏರ್ಪಡಿಸಲಾಗಿತ್ತು.ಮೊದಲ ವಿಮಾನದಲ್ಲಿ 168 ಹಾಗೂ ಎರಡನೇ ವಿಮಾನದಲ್ಲಿ  175‌ಕನ್ನಡಿಗರನ್ನೊಳಗೊಂಡ ವಿಮಾನವು ಯಶಸ್ವಿಯಾಗಿ ಬೆಂಗಳೂರಿಗೆ ತಲುಪಿದೆ ಎಂದು ರಜಾಕ್  ಫೈಝಿ ಹೇಳಿದರು.
ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರಿಗೆ ಆಸರೆಯಾಗಿ‌ ಜಿಸಿಸಿ ಕೊಡಗು ಕಾರ್ಯನಿರ್ವಹಿಸುತ್ತಿದೆ.‌ಇದೀಗ ರಿಯಾದ್ ನಿಂದ ಬೆಂಗಳೂರಿಗೆ ಮೊದಲ‌ ವಿಮಾನವನ್ನು ಏರ್ಪಡಿಸಿದ್ದು,ಎಸ್.ಕೆ.ಎಸ್.ಎಸ್.ಎಫ್ ಪ್ರಯಾಣಿಕರು ಸೇರಿ 175ಕನ್ನಡಿಗರು‌ ಮರಳಿ‌ ತಾಯ್ನಾಡು ತಲುಪಲಿದ್ದಾರೆ.ಈ ವಿಮಾನದಲ್ಲಿ ಕೊಡಗು ಜಿಲ್ಲೆಯವರು  ಇದ್ದಾರೆ ಎಂದು ರಜಾಕ್  ಫೈಝಿ ಮಾಹಿತಿ ನೀಡಿದರು.
ಎಸ್.ಕೆ.ಎಸ್.ಎಸ್.ಎಫ್ , ಜಿಸಿಸಿ ಕೊಡಗು ಕಾರ್ಯದರ್ಶಿ ಅಶ್ರಫ್ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಬೇಕು ಎಂದರು.

ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ತೆರಳುವ ಸಾರಿಗೆ ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ಜಿಸಿಸಿ ಕೊಡಗು ಸಂಘಟನಾ ಕಾರ್ಯದರ್ಶಿ ಅಬ್ದುಲ್ ಗಫೂರ್ ,ಸೈನುದ್ದೀನ್ , ಇರ್ಷಾದ್ ಸೌದಿ, ಅಶ್ರಫ್ ಕೊಪ್ಪಕರೆ ಅವರ ನೇತೃತ್ವದಲ್ಲಿ ಮಾಡಲಾಗಿತ್ತು.
ಈ ಸಂದರ್ಭ ಶಿಯಾಬ್ , ಕಮುರುದ್ದೀನ್ ಸೌದಿ,ಫೈರೋಝ್ ಪೊನ್ನಂಪೇಟೆ, ಸುಲೈಮಾನ್ ಸೌದಿ, ಅಬ್ಬಾಸ್ ಹಾಜಿ, ಸೈದಾಲಿ ಫೈಝಿ, ಅಸ್ಲಮ್,  ಕೋಯಮ್ಮ ಹಾಜಿ  ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕಾರ್ಯಕರ್ತರು, ಜಿಸಿಸಿ‌ ಸದಸ್ಯರು , ವಿಖಾಯ ಸದಸ್ಯರು ಇದ್ದರು.