ಅಂಬೇಡ್ಕರ್ ನಿವಾಸಕ್ಕೆ ಹಾನಿ : ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಖಂಡನೆ

14/07/2020

ವಿರಾಜಪೇಟೆ, ಜು. 14 : ಮಹಾರಾಷ್ಟ್ರದ ಮುಂಬೈನ ದಾದರ್‌ನಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಾಸವಿದ್ದ ರಾಜಗೃಹವನ್ನು ಧ್ವಂಸಗೊಳಿಸಿರುವ ಕೆಲವು ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೇಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮತ್ತು ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭೌವ್ಯ ಭಾರತ ಪ್ರಜಾಪ್ರಭುತ್ವದ ಸಂವಿಧಾನವನ್ನು ರಚನೆಮಾಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿವಾಸವನ್ನು ಕೆಲವು ಸಮಾಜ ಘಾತುಕ ಶಕ್ತಿಗಳ ಕೈವಾಡದಿಂದ ಹಾಳು ಕೆಡವಿರುವುದು ಖಂಡನೀಯ ಎಂದರು.
ದೇಶ ಭಕ್ತ, ಸಂವಿಧಾನ ಶಿಲ್ಪಿಯ ನಿವಾಸಕ್ಕೆ ಭದ್ರತೆ ಇಲ್ಲದಿರುವುದು ಶೋಚನಿಯ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ವತಂತ್ರ ಸಂಗ್ರಾಮದ ನಾಯಕರ ಮನೆಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಅಲ್ಲದೆ ರಾಜಗೃಹ ಹಾಳುಗೇಡವಿದ ಕಿಡಿಗೇಡಿಗಳನ್ನು ಬಂದಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.