ಲಾಕ್ ಡೌನ್ ಇದ್ದರೂ ಅನಗತ್ಯ ಸಂಚಾರ : ವಿರಾಜಪೇಟೆಯಲ್ಲಿ ದಂಡ ವಿಧಿಸಿದ ಪೊಲೀಸು ಇಲಾಖೆ

14/07/2020

ವಿರಾಜಪೇಟೆ ಜು. 14 : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂಜಾಗೃತ ಕ್ರಮವಾಗಿ ವಾರದ ಅಂತ್ಯದಲ್ಲಿ ಲಾಕ್‍ಡೌನ್ ಆದೇಶವನ್ನು ಘೋಷಿಸಿತ್ತು. ಆದರೆ ಕೆಲವರು ಲಾಕ್‍ಡೌನ್ ಆದೇಶವನ್ನು ಉಲ್ಲಂಘನೆ ಮಾಡಿ ಅನಗತ್ಯವಾಗಿ ಸಂಚರಿಸುತ್ತಿರುವವರಿಗೆ ಪೊಲೀಸ್ ಇಲಾಖೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಂಡಿದ್ದು ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವಾರದ ಅಂತ್ಯದಲ್ಲಿ ಲಾಕ್ ಡೌನ್ ಆದೇಶ ಮಾಡಿದರು. ಆದರೆ ನಗರದಲ್ಲಿ ಅನಗತ್ಯವಾಗಿ ಸಂಚಾರ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡದಿರುವುದು ಮತ್ತು ಮಾಸ್ಕ್ ಧರಿಸದೆ ಆದೇಶವನ್ನು ಪಾಲಿಸದೆ ಇರುವವರಿಗೆ ನಿಯಮಾಸುಸಾರ ದಂಡ ವಿಧಿಸಿತು. ವಾಹನ ಸಂಚಾರಕ್ಕೆ ತಲ 500 ರಂತೆ ನಾಲ್ಕು ವಿವಿಧ ವಾಹನಗಳಿಗೆ 2000 ರೂ. ಗಳು ಮತ್ತು ಸಾಮಾಜಿಕ ಅಂತರ ಮಾಸ್ಕ್ ಧರಿಸದಿರುವುದಕ್ಕೆ ತಲ 100 ರಂತೆ ಮೂವರಿಗೆ ದಂಡ ವಿಧಿಸಿತು. ಲಾಕ್ ಡೌನ್ ಉಲ್ಲಂಘನೆಯಿಂದ ಒಟ್ಟು 2300 ರೂಪಾಯಿಗಳು ದಂಡದ ರೂಪದಲ್ಲಿ ಸಂಗ್ರಹವಾಗಿದೆ ಎಂದು ವಿರಾಜಪೇಟೆ ನಗರ ಠಾಣಾಧಿಕಾರಿ ಹೆಚ್.ಎಸ್. ಭೋಜಪ್ಪ ಅವರು ಮಾಹಿತಿ ನೀಡಿದರು.

ಸರ್ಕಾರವು ಜೌಷದಿ ಅಂಗಡಿ, ತರಕಾರಿ ಅಂಗಡಿ, ದಿನಸಿ ಅಂಗಡಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಮಾಂಸ ಮತ್ತು ಮೀನು ಮಳಿಗೆಗಳನ್ನು ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲ ಮಾಡಿತ್ತು. ಆದರೆ ನಾವುಗಳು ಲಾಕ್ ಡೌನ್ ಎಂದು ತಿಳಿದಿದ್ದಿರು ಜೌಷದಿ ಖರೀದಿಸಲು ಪಟ್ಟಣಕ್ಕೆ ಅಗಮಿಸಿ ಹಿಂದಿರುಗುವ ವೇಳೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಎಂದು ಇಲಾಖೆಯು ದಂಡ ವಿದಿಸಿದೆ ಎಂದು ನಗರ ವಾಸಿಯೋರ್ವರು ತಮ್ಮ ಅಳಲು ತೊಡಿಕೊಂಡರು.
ಸರ್ಕಾರದ ದಂದ್ವ ನೀತಿಯಾಗಿದ್ದು. ಲಾಕ್ ಡೌನ್ ಆದೇಶ ಮಾಡುವ ವೇಳೆಯಲ್ಲಿ ಕೆಲವು ಸಾದಕ ಭಾದಕಗಳನ್ನು ನೋಡಿಕೊಂಡು ಆದೇಶ ಮಾಡುವಂತಾಗಬೇಕು. ನಿಯಮ ಉಲ್ಲಂಘನೆ ಎಂದು ದಂಡವಿದಿಸುವುದರ ಬಗ್ಗೆ ಸಾರ್ವಜನಿಕರರಲ್ಲಿ ಗೊಂದಲವಿದೆ ವಿಷಯದ ಬಗ್ಗೆ ಜಿಲ್ಲಾಢಳಿತವು ಸೂಕ್ತ ಮಾಹಿತಿ ಒದಗಿಸುವಂತೆ ನೆಗರು ನಗರದ ನಿವಾಸಿ ಅಗಸ್ಟೀನ್ ಕ್ಸೆವೀಯರ್ ಅವರು ಆಗ್ರಹಿಸದ್ದಾರೆ.