ಸಿಬಿಎಸ್‍ಇ ಪರೀಕ್ಷೆಯಲ್ಲಿ ಶೇ.88.78 ತೇರ್ಗಡೆ

July 14, 2020

ನವದೆಹಲಿ ಜು.14 : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‍ಇ)ಯ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟಾರೆ ಶೇಕಡಾ 88.78ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ತೇರ್ಗಡೆ ಫಲಿತಾಂಶ ಶೇಕಡಾ 5.38ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಒಟ್ಟಾರೆ ಫಲಿತಾಂಶ ಶೇಕಡಾ 83.40ರಷ್ಟಾಗಿತ್ತು.
ಕೇರಳದ ತಿರುವನಂತಪುರ ವಲಯದಲ್ಲಿ ಅತಿಹೆಚ್ಚು ತೇರ್ಗಡೆ ಫಲಿತಾಂಶ ಶೇಕಡಾ 97.67 ದಾಖಲಾಗಿದೆ. ಪಾಟ್ನಾದಲ್ಲಿ ಅತಿ ಕಡಿಮೆ ಫಲಿತಾಂಶ ಶೇಕಡಾ 74.57 ದಾಖಲಾಗಿದೆ.
ಬೆಂಗಳೂರು ವಲಯದಲ್ಲಿ ಶೇಕಡಾ 97.05ರಷ್ಟು ಫಲಿತಾಂಶ ಬಂದಿದ್ದು ಅದು ದೇಶದ ಒಟ್ಟಾರೆ ಫಲಿತಾಂಶ ಶೇಕಡಾ 88.78ಕ್ಕಿಂತ ಹೆಚ್ಚಾಗಿದೆ. ದೇಶದ ಒಟ್ಟಾರೆ 16 ವಲಯಗಳಲ್ಲಿ ತಿರುವನಂತಪುರದ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ ಪಶ್ಚಿಮ ಮತ್ತು ಪೂರ್ವ ವಲಯಗಳು ಇವೆ.
ಪ್ರಸಕ್ತ ಸಾಲಿನಲ್ಲಿ 12 ಲಕ್ಷದ 3 ಸಾವಿರದ 595 ಮಂದಿ ಪರೀಕ್ಷೆಗೆ ದಾಖಲಾತಿ ಪಡೆದುಕೊಂಡು 11 ಲಕ್ಷದ 92 ಸಾವಿರದ 961 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.