ಕೋವಿಡ್ ಚಿಕಿತ್ಸಾ ಲಸಿಕೆಗೆ ಅನುಮತಿ

July 14, 2020

ಬೆಂಗಳೂರು ಜು.13 : ಬೆಂಗಳೂರು ಮೂಲದ ಬಯೋಫಾರ್ಮಾಟಿಕಲ್ ವಲಯದ ಪ್ರಸಿದ್ಧ ಬಯೋಕಾನ್ ಸಂಸ್ಥೆಯು ಸಿದ್ಧಪಡಿಸಿರುವ “ಇಟೋಲಿಝುಮಬ್” ಲಸಿಕೆಯನ್ನು ಮಧ್ಯಮ ಹಾಗೂ ತೀವ್ರ ಭಾದಿತ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.
25ಎಂಜಿಯ 5 ಎಂಎಲ್ ಇಂಜೆಕ್ಷನ್ ನಿಂದ ಕೋವಿಡ್-19 ನಿಂದ ತೀವ್ರ ಹಾಗೂ ಮಧ್ಯಮ ಭಾದಿತ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಪ್ರತಿ ಬಾಟಲಿ ಬೆಲೆ 8 ಸಾವಿರ ರೂ.ಆಗಿರುತ್ತದೆ. ಇಂತಹ ನಾಲ್ಕು ಬಾಟಲಿಗಳನ್ನು ನೀಡಬೇಕಾಗುತ್ತದೆ.
ಮಧ್ಯಮ ಹಾಗೂ ತೀವ್ರ ಕೋವಿಡ್-19 ಭಾದಿತ ರೋಗಿಗಳ ಚಿಕಿತ್ಸೆಗಾಗಿ ಮೊದಲ ನೋವಾಲ್ ಬಯೋಲಾಜಿಕಲ್ ಥೆರಪಿಯನ್ನುನೀಡಲು ಡಿಸಿಐಜಿ ಅನುಮೋದನೆ ನೀಡಿದ್ದು, “ಇಟೋಲಿಝುಮಬ್” ಹಲವರ ಜೀವವನ್ನು ಉಳಿಸಿದೆ. ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಡಿಸಿಜಿಐ ಅನುಮತಿ ನೀಡಿದೆ ಎಂದು ಬಯೋಕಾನ್ ಸಂಸ್ಥೆಯ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಕಿರಣ್ ಮಜುಂದಾರ್ ಷಾ ತಿಳಿಸಿದ್ದಾರೆ.