ಪಿಯುಸಿ ಫಲಿತಾಂಶ : ಕೊಡಗು ದ್ವಿತೀಯ

July 14, 2020

ಮಡಿಕೇರಿ ಜು. 14 : ದ್ವಿತೀಯ ಪಿಯುಸಿ ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಕಟಿಸಿದೆ.
ಶೇ.90.71 ಫಲಿತಾಂಶ ಪಡೆದಿರುವ ಉಡುಪಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಶೇ. 81.53 ಫಲಿತಾಂಶವನ್ನು ಪಡೆದಿರುವ ಕೊಡಗು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಕಳೆದ ಬಾರಿ ಕೊಡಗು ಜಿಲ್ಲೆಗೆ 81.53 ಫಲಿತಾಂಶ ದೊರಕಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.