ಕೊಲ್ಲಾಪುರಿ ಚಿಕನ್ ಸಾರು ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ಚಿಕನ್- ಅರ್ಧ ಕೆಜಿ, ಮೊಸರು – 50 ಗ್ರಾಂ, ಅರಿಶಿಣ ಪುಡಿ- ಅರ್ಧ ಚಮಚ, ಈರುಳ್ಳಿ -(ಕತ್ತರಿಸಿದ್ದು), ಖಾರದ ಪುಡಿ – ಅರ್ಧ ಚಮಚ , ಶುಂಠಿ-ಬೆಳ್ಳುಳ್ಳಿ – ಪೇಸ್ಟ್ 1 ಚಮಚ, ಜೀರಿಗೆ – 1 ಚಮಚ , ಕರಿ ಮೆಣಸು- 4-5, ಗಸೆಗಸೆ – 1 ಚಮಚ, ಗೋಡಂಬಿ: 5-6, ಚಕ್ಕೆ ಲವಂಗ 2-3 , ತೆಂಗಿನ ತುರಿ – 1 ಕಪ್ , ಟೊಮೆಟೊ- 1 , ಎಣ್ಣೆ , ರುಚಿಗೆ ತಕ್ಕ ಉಪ್ಪು .
ತಯಾರಿಸುವ ವಿಧಾನ: ಚಿಕನ್ ತುಂಡನ್ನು ತೊಳೆದು ಉಪ್ಪು, ಮೊಸರು, ಅರಿಶಿಣ, ಖಾರದ ಪುಡಿ ಹಾಕಿ ಕಲೆಸಿ 1 ಗಂಟೆ ಫ್ರಿಜ್ ನಲ್ಲಿಡಿ. ನಂತರ ಫ್ರಿಜ್ ನಿಂದ ತೆಗೆದು 10 ನಿಮಿಷ ಹಾಗೇ ಇಡಿ. ಈಗ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಕತ್ತರಿಸಿ ಗೋಡಂಬಿ, ಕೊತ್ತಂಬರಿ ಬೀಜ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿ ಈರುಳ್ಳಿಯಲ್ಲಿ ಅರ್ಧ ಭಾಗವನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ತೆಂಗಿನ ತುರಿಯನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಚಕ್ಕೆ, ಲವಂಗ, ಕರಿ ಮೆಣಸು, ಗಸೆಗಸೆ, ಜೀರಿಗೆ ಸೇರಿಸಿ 2 ನಿಮಿಷ ಹುರಿದು ನಂತರ ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ. ತಣ್ಣಗಾದ ನಂತರ ರುಬ್ಬಿ. ಈಗ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ. ಈಗ ಕತ್ತರಿಸಿದ ಟೊಮೆಟೊ ಹಾಕಿ ನಂತರ ಚಿಕನ್, ರುಬ್ಬಿದ ಮಸಾಲೆ, , ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ, ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ತುಂಬಾ ಡ್ರೈಯಾದರೆ ಸ್ವಲ್ಪ ನೀರು ಬೇಕಾದರೆ ಹಾಕಬಹುದು. ಚಿಕನ್ ಬೆಂದ ನಂತರ ಉಪ್ಪು ನೋಡಿ ಉರಿಯಿಂದ ಇಳಿಸಿದರೆ ಕೊಲ್ಲಾಪುರಿ ಚಿಕನ್ ಸಾರು ರೆಡಿ.
