ಹೆಬ್ಬೆಟ್ಟಗೇರಿಯ ಸೀಲ್‍ಡೌನ್ ನಿವಾಸಿಗಳಿಗೆ ದಿನಸಿ ಕಿಟ್ ವಿತರಣೆ

July 14, 2020

ಮಡಿಕೇರಿ ಜು. 14 : ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಕೆಲ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಹೆಚ್ಚು ಕೂಲಿ ಕಾರ್ಮಿಕರು ಇರುವ ಈ ಪ್ರದೇಶ ನಿವಾಸಿಗಳಿಗೆ ದಾನಿಗಳು ಅಗತ್ಯ ಸಾಮಾಗ್ರಿ ವಿತರಿಸಿ ನೆರವು ನೀಡಿದರು.

ಮಾಜಿ ಗ್ರಾ.ಪಂ ಅಧ್ಯಕ್ಷ ಕೊಕ್ಕಲೇರ ಅಯ್ಯಪ್ಪ, ಗುತ್ತಿಗೆದಾರರಾದ ಜಗದೀಶ್ ರೈ, ನಿಸಾರ್, ಕೃಷ್ಣಪ್ಪ, ಧರ್ಮರಾಜು ತಮ್ಮ ಸ್ವಂತ ಖರ್ಚಿನಲ್ಲಿ ಒಂದು ವಾರಕ್ಕೆ ಬೇಕಾಗುವ ತಲಾ ರೂ 1,500 ಬೆಲೆ ಬಾಳುವ ದಿನಸಿ ಕಿಟ್ಟನ್ನು 50 ಕುಟುಂಬಗಳಿಗೆ ನೀಡಿದರು.

ಹೆಬ್ಬೆಟ್ಟಗೇರಿ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟ ಬಳಿಕ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಸಹಜವಾಗಿ ಕೆಲಸವಿಲ್ಲದೆ ಜನರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದರು. ಈ ಹಿನ್ನೆಲೆÀ ಕೊಕ್ಕಲೇರ ಅಯ್ಯಪ್ಪ ಮತ್ತು ತಂಡ ಹೆಬ್ಬಟ್ಟಗೇರಿ, ಷಣ್ಮುಗ ಕಾಲೋನಿ, ಜಹಂಗೀರ್ ಪೈಸಾರಿ, ಇಂದ್ರಪ್ರಸ್ಥ ನಗರ, ನಂದಿಮೊಟ್ಟೆ ಕಾಲೋನಿ, ನಿಸರ್ಗ ಬಡಾವಣೆಯ ನಿವಾಸಿಗಳಿಗೆ ಕಿಟ್ ವಿತರಿಸಿದರು.

ಕಿಟ್ ವಿತರಿಸಿ ಮಾತನಾಡಿದ ದಾನಿ ಕೊಕ್ಕಲೇರ ಅಯ್ಯಪ್ಪ, ಈ ಪ್ರದೇಶದಲ್ಲಿ ಹೆಚ್ಚಿನವರು ದಿನಗೂಲಿಯಿಂದ ಜೀವನ ನಡೆಸುತ್ತಿದ್ದು, ಸೀಲ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ದಾನಿಗಳ ಮೂಲಕ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ ಎಂದರು.

ಸೀಲ್‍ಡೌನ್‍ನಿಂದ ಆರ್ಥಿಕ ಸಮಸ್ಯೆ ಉಂಟಾಗಿದ್ದು, ಸ್ಥಳಿಯ ಆಡಳಿತ ಕೂಡ ಸೂಕ್ತ ಸಹಾಯ ನೀಡಿಲ್ಲ. ವೈಯುಕ್ತಿಕವಾಗಿ ದಾನಿಗಳ ನೆರವನ್ನು ಸ್ಥಳೀಯರು ಶ್ಲಾಘಿಸಿದರು.

error: Content is protected !!