ದುದ್ದಿಯಂಡ ಮೊಹಮ್ಮದ್ ಜ್ಹಿಯಾನ್ ಜವಾಹರ್ ನವೋದಯ ವಿದ್ಯಾಲಯಕ್ಕೆ ಟಾಪರ್ : ದ್ವಿತೀಯ ಪಿಯುಸಿ ಸಿಬಿಎಸ್ಸಿ ಪರೀಕ್ಷೆಯಲ್ಲಿ ವಿರಾಜಪೇಟೆ ವಿದ್ಯಾರ್ಥಿಯ ಸಾಧನೆ

July 14, 2020

ಪೊನ್ನಂಪೇಟೆ, ಜು.14: ಸೋಮವಾರದಂದು ಪ್ರಕಟಗೊಂಡ 2019-20 ನೇ ಸಾಲಿನ ಸಿಬಿಎಸ್ಸಿ ವಿಭಾಗದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ದುದ್ದಿಯಂಡ ಎಂ. ಮೊಹಮ್ಮದ್ ಜ್ಹಿಯಾನ್ ಶಾಲೆಗೆ ‘ಟಾಪರ್’ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಪಿಸಿಎಂಬಿ ವಿಭಾಗದಲ್ಲಿ ಶೇ. 94.6% ಅಂಕ ಪಡೆದು ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ತೇರ್ಗಡೆಯಾಗಿದ್ದಾರೆ.

ಇವರು ವಿರಾಜಪೇಟೆ ತಾಲ್ಲೂಕಿನ ನಲ್ವತ್ತೋಕ್ಲು ಗ್ರಾಮದ ನಿವಾಸಿಯಾಗಿರುವ, ಹಾಲಿ ಗಡಿ ಭದ್ರತಾ ಪಡೆ(ಬಿ.ಎಸ್.ಎಫ್.)ಯಲ್ಲಿ ಸೇವೆ ಸಲ್ಲಿಸುತ್ತಿರುವ ದುದ್ದಿಯಂಡ ಎ. ಮಜೀದ್ ಅವರ ಪುತ್ರನಾಗಿದ್ದಾರೆ.

ವ್ಯಾಸಂಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಇವರು, ಕಳೆದ ಎರಡು ವರ್ಷಗಳ ಹಿಂದೆ 10ನೇ ತರಗತಿ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಗೆ ಅತ್ಯುತ್ತಮ ಫಲಿತಾಂಶ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

error: Content is protected !!