ಕೊಡಗಿನಲ್ಲಿ ಒಂದೇ ದಿನ 33 ಮಂದಿಗೆ ಸೋಂಕು : ಸೋಂಕಿತರ ಸಂಖ್ಯೆ 217ಕ್ಕೆ ಏರಿಕೆ

14/07/2020

ಮಡಿಕೇರಿ ಜು.14 : ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 33 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 217 ಕ್ಕೆ ಏರಿಕೆಯಾಗಿದೆ.
ಮಂಗಳವಾರ ಬೆಳಗ್ಗೆ ಮಡಿಕೇರಿ ಪಟ್ಟಣದ ಐ.ಟಿ.ಐ ಜಂಕ್ಷನ್ ಬಳಿ ವಾಸವಿರುವ, ಬಾಗಲಕೋಟೆ ಪ್ರಯಾಣದ ಇತಿಹಾಸ ಇರುವ ಪೆÇಲೀಸ್ ಇಲಾಖೆಯ 32 ವರ್ಷದ ಪುರುಷ ಸಿಬ್ಬಂದಿ, ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಹರಿಶ್ಚಂದ್ರಪುರದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 37 ವರ್ಷದ ಪುರುಷ,ಸಿದ್ದಾಪುರ ಸಮೀಪದ ಕರಡಿಗೋಡು ನಿವಾಸಿ ಕೇರಳದ ಕಣ್ಣೂರು ಪ್ರಯಾಣದ ಇತಿಹಾಸವಿರುವ 56 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ಮಾದಪ್ಪ ಕಾಲೋನಿ ನಿವಾಸಿ 58 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆ, ಪಿರಿಯಾಪಟ್ಟಣ ತಾಲ್ಲೂಕು, ಚೆನ್ನಕಲ್ ಕೊಪ್ಪ ಗ್ರಾಮದ ನಿವಾಸಿಯಾದ ಜ್ವರ ಲಕ್ಷಣಗಳಿದ್ದ 15 ವರ್ಷದ ಹುಡುಗನಲ್ಲೂ ಸೋಂಕು ಕಾಣಿಸಿಕೊಂಡಿದೆ.
ಸೋಮವಾರಪೇಟೆ ತಾಲೂಕು ಕುಶಾಲನಗರದ ದಂಡಿನಪೇಟೆಯ (ಕುಸುಮ ಸ್ಟೋರ್ ಬಳಿ) ನಿವಾಸಿ, ಜ್ವರ ಲಕ್ಷಣಗಳಿದ್ದ 22 ವರ್ಷದ ಮಹಿಳೆ, ದಂಡಿನಪೇಟೆಯ (ರೋಟರಿ ಹಾಲ್ ಬಳಿ) ನಿವಾಸಿ, 48 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆ, ಕುಶಾಲನಗರದ ಕೂಡ್ಲೂರು ನಿವಾಸಿ ಉಕ್ರೈನ್ ನಿಂದ ಹಿಂದಿರುಗಿದ್ದ 18 ವರ್ಷದ ಯುವಕ, ತೊರೆನೂರು ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 25 ವರ್ಷದ ಪುರುಷರೊಬ್ಬರಲ್ಲೂ ಸೋಂಕು ದೃಢಪಟ್ಟಿದೆ.
ವೀರಾಜಪೇಟೆ ತಾಲೂಕು 1ನೇ ರುದ್ರಗುಪ್ಪೆ (ತೋತೇರಿ) ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 38 ವರ್ಷದ ಪುರುಷ, ಕುಶಾಲನಗರದ ತೊರೆನೂರು ನಿವಾಸಿ ಬೆಂಗಳೂರಿನಿಂದ ಹಿಂದಿರುಗಿದ್ದ 25 ವರ್ಷದ ಪುರುಷ, ಮಡಿಕೇರಿ ಪಟ್ಟಣದ ಪುಟಾಣಿ ನಗರ ನಿವಾಸಿ, ಮಂಗಳೂರಿನಿಂದ ಹಿಂದಿರುಗಿದ್ದ 54 ವರ್ಷದ ಪುರುಷರೊಬ್ಬರಿಗೂ ಕೊರೋನಾ ಸೋಂಕು ಆವರಿಸಿದೆ.
ಜಿಲ್ಲಾಡಳಿತ ಮಧ್ಯಾಹ್ನ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ ಕುಶಾಲನಗರ ಜನತಾ ಕಾಲೋನಿಯ ಜ್ವರದ ಲಕ್ಷಣವಿದ್ದ 17 ವರ್ಷದ ಯುವತಿ, ಅಂತರ ಜಿಲ್ಲೆಯ ಪ್ರವಾಸದ ಇತಿಹಾಸವಿರುವ ಸಿದ್ದಾಪುರದ ಹಳೆಸಿದ್ದಾಪುರ ಹೆಚ್‍ಎಸ್ ರಸ್ತೆಯ 70 ವರ್ಷ ಪುರುಷ ಹಾಗೂ 43 ವರ್ಷದ ಮಹಿಳೆ, ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ಕೂರ್ಗಳ್ಳಿ ಎಸ್ಟೇಟ್‍ನ, ಅಂತರ ರಾಜ್ಯ ಪ್ರವಾಸ ಇತಿಹಾಸವಿರುವ 20 ವರ್ಷದ ಮಹಿಳೆ, ಅಂತರ ರಾಜ್ಯ ಪ್ರವಾಸದ ಇತಿಹಾಸವಿರುವ ಸಿದ್ದಾರಪುರ ಎಂ.ಜಿ.ರಸ್ತೆಯ 47 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಮತ್ತೊಂದೆಡೆ ಗೋಣಿಕೊಪ್ಪದ ಹರಿಶ್ಚಂದ್ರಪುರ ಜೈಹಿಂದ್ ವರ್ಕ್‍ಶಾಪ್ ಬಳಿಯ ಜ್ವರ ಲಕ್ಷಣವಿದ್ದ 43 ವರ್ಷದ ಮಹಿಳೆ, ಪೊನ್ನಂಪೇಟೆಯ ಹುದಿಕೇರಿ ರಸ್ತೆಯ ಮೇಟಗೇರಿಯ ಜ್ವರ ಲಕ್ಷಣವಿದ್ದ 42 ವರ್ಷದ ಪುರುಷ, ಮೂಲತಃ ಹುಂಡಿ ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದು, ಪ್ರಸಕ್ತ ಬಾಡಗ ಬಾಣಂಗಾಲದಲ್ಲಿ ನೆಲೆಸಿರುವ 10 ಮತ್ತು 15 ವರ್ಷದ ಬಾಲಕರು ಹಾಗೂ 33 ವರ್ಷದ ಮಹಿಳೆ, ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ವರ್ಷದ ಪುರುಷ, ಅಂತರ ಜಿಲ್ಲೆ ಇತಿಹಾಸವಿದ್ದು, ಜ್ವರ ಲಕ್ಷಣವಿದ್ದ ಮಡಿಕೇರಿ ಮಹದೇವಪೇಟೆಯ 52 ವರ್ಷದ ಪುರುಷ, ತೊರೆನೂರು ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಅಲ್ಲಿನ ಗ್ರಾಮ ಪಂಚಾಯತ್ ಮುಂಭಾಗದ 36 ವರ್ಷ ಪ್ರಾಯದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಶಿರಂಗಾಲದ ಈ ಹಿಂದಿನ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 17 ವರ್ಷ ಪುರುಷ, ಶಿರಂಗಾಲ ಸಾಲುಕೊಪ್ಪಲುವಿನ 44 ವರ್ಷದ ಪುರುಷ, ಗೋಣಿಕೊಪ್ಪದ ಅಚ್ಚಪ್ಪ ಲೇಔಟ್‍ನ 43 ವರ್ಷದ ಮಹಿಳೆ, ಮಡಿಕೇರಿ ರಾಣಿಪೇಟೆಯ ಜ್ವರ ಲಕ್ಷಣವಿದ್ದ 38 ವರ್ಷ ಹಾಗೂ ತಾಳತ್‍ಮನೆಯ ಜ್ವರ ಲಕ್ಷಣವಿದ್ದ 34 ವರ್ಷದ ಪುರುಷರು, ಮಡಿಕೇರಿ ಗದ್ದಿಗೆಯ ಸೋಂಕಿತರ ಪ್ರಾಥಮಿಕ ಸಂಪರ್ಕದ 22ವರ್ಷದ ಪುರುಷ, ಸುಂಟಿಕೊಪ್ಪ ಎಮ್ಮೆಗುಂಡಿ ರಸ್ತೆಯ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 34 ವರ್ಷದ ಪುರುಷ ಹಾಗೂ ಅಂತರ ರಾಜ್ಯ ಪ್ರವಾಸ ಇತಿಹಾಸ ಹೊಂದಿದ್ದು, ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿರುವ 51 ವರ್ಷದ ಪುರುಷನಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 217ಕ್ಕೇರಿದ್ದು, ಈ ಪೈಕಿ 87 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಮೂರು ಮಂದಿ ಸಾವಿಗೀಡಾಗಿದ್ದಾರೆ. 127 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 19 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆಯೂ 95ಕ್ಕೆ ಏರಿಕೆಯಾಗಿದೆ.