ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಟಿ.ಎನ್. ಚಿತ್ರ ಪ್ರಥಮ

14/07/2020

ವಿರಾಜಪೇಟೆ:ಜು.14: ಪಟ್ಟಣದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಚಿತ್ರ ಟಿ.ಎನ್. ಈ ಸಾಲಿನ ದ್ವಿತೀಯ ಪಿಯು ಪರೀಕ್ಚೆಯಲ್ಲಿ 585 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಾಲೇಜಿನ ವಾಣಿಜ್ಯ ವಿಭಾಗದ ಮತ್ತೋರ್ವ ವಿದ್ಯಾರ್ಥಿನಿ ದೇವಿಕ ಎ.ಎಂ. 584 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಫ್ಸ ಕುಲ್ಸುಂ 572 ಅಂಕಗಳನ್ನು ಪಡೆಯುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಶಿಜ ಮೆಹೆಕ್ ಎಸ್.ಕೆ. 579 ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರೆ, 566 ಅಂಕ ಪಡೆದ ವಿದ್ಯಾರ್ಥಿನಿ ಲೇಖನ ಕೆ.ಆರ್. ದ್ವಿತೀಯ ಹಾಗೂ ಪಿ.ಕೆ.ಜೀವಿತ್ 561 ಅಂಕಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಈ ಸಾಲಿನಲ್ಲಿ ದ್ವಿತೀಯ ಪಿ.ಯು ಪರೀಕ್ಷೆ ಬರೆದ 241 ವಿದ್ಯಾರ್ಥಿಗಳಲ್ಲಿ, 54 ಉನ್ನತ ಶ್ರೇಣಿ, 144 ಪ್ರಥಮ ದರ್ಜೆ ಹಾಗೂ 32 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗ ಶೇ.99 ರಷ್ಟು ಹಾಗೂ ವಾಣಿಜ್ಯ ವಿಭಾಗದ ಶೇ.97 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಒಟ್ಟಾರೆಯಾಗಿ ಕಾಲೇಜು ಶೇ.98 ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.
ಸರಕಾರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ: ಕಾಲೇಜಿನ ವಿಜ್ಞಾನ ವಿಭಾಗವು ಶೇ.93 ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದೆ. ವಾಣಿಜ್ಯ ವಿಭಾಗವು ಶೇ.76 ಹಾಗೂ ಕಲಾ ವಿಭಾಗವು ಶೇ.60 ರಷ್ಟು ಫಲಿತಾಂಶವನ್ನು ಪಡೆದಿದೆ. ಕಾಲೇಜಿನಿಂದ ಪರೀಕ್ಷೆ ಹಾಜರಾದ 143 ವಿದ್ಯಾರ್ಥಿಗಳಲ್ಲಿ 101 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಒಟ್ಟಾರೆಯಾಗಿ ಶೇ. 71 ರಷ್ಟು ಫಲಿತಾಂಶ ಪಡೆದಿದೆ.
ಒಟ್ಟು 4 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿನ ವಾಣಿಜ್ಯ ವಿಭಾಗದ ಭವಾನಿ ಟಿ.ಕೆ 526 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದ ತನುಷಾ 511 ಅಂಕ, ಕಲಾ ವಿಭಾಗದ ಸಫಾನ 525 ಅಂಕ, ಪೂಜಾ ಎಚ್.ಪಿ. 519 ಅಂಕ, ವಿಜ್ಞಾನ ವಿಭಾಗದಲ್ಲಿ ಸಮೀಕ್ಷಾ 494 ಅಂಕ ಹಾಗೂ ಪುಷ್ಪಾ ಜೆ.ಆರ್. 484 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕಾವೇರಿ ಕಾಲೇಜು ವಿರಾಜಪೇಟೆ: ಈ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾಲೇಜು ಶೇ. 63 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದ 117 ವಿದ್ಯಾರ್ಥಿಗಳಲ್ಲಿ 74 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗವು ಶೇ. 89, ವಾಣಿಜ್ಯ ವಿಭಾಗವು ಶೇ. 67 ಹಾಗೂ ಕಲಾ ವಿಭಾಗವು ಶೇ. 36 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ. ಮೂವರು ಉನ್ನತ ಶ್ರೇಣಿ, 28 ಪ್ರಥಮ ದರ್ಜೆ ಹಾಗೂ 30 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.
ಸರಕಾÀರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ: ಕಾಲೇಜಿನಿಂದ ಪರೀಕ್ಷೆಗೆ ಹಾಜರಾದ 79 ವಿದ್ಯಾರ್ಥಿಗಳಲ್ಲಿ 43 ತೇರ್ಗಡೆಯಾಗುವ ಮೂಲಕ ಕಾಲೇಜು ಶೇ. 54 ರಷ್ಟು ಫಲಿತಾಂಶ ಪಡೆದುಕೊಂಡಿದೆ. 2 ಉನ್ನತ ದರ್ಜೆ, 29 ಪ್ರಥಮ ದರ್ಜೆಯಲ್ಲಿ ಹಾಗೂ 11 ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ. ವಾಣಿಜ್ಯ ವಿಭಾದ ಶೇ.60 ಹಾಗೂ ಕಲಾ ವಿಭಾಗ ಶೇ. 47 ಫಲಿತಾಂಶ ಪಡೆದುಕೊಂಡಿದೆ.
ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಫ್ಸಾನ ಎನ್ 519 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ನಿಶಾನ ಪಿ.ಎನ್. 517 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದರೆ, ಕಲಾ ವಿಭಾಗದ ಪ್ರತಿಮಾ 505 ಅಂಕ ಹಾಗೂ ಜೀವಿತಾ 495 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಅರಮೇರಿ ಎಸ್ ಎಂಎಸ್ ಪಿಯು ಕಾಲೇಜು : ಎಸ್ ಎಂಎಸ್ ಪಿಯು ಕಾಲೇಜು ಶೇ.100 ಫಲಿತಾಂಶ ಪಡೆದುಕೊಂಡಿದೆ.
ವಿರಾಜಪೇಟೆ ಜೂನಿಯರ್ ಕಾಲೇಜು : ಕಾಲೇಜಿನಿಂದ ಪರೀಕ್ಷೆಗೆ ಹಾಜರಾದ 143 ವಿದ್ಯಾರ್ಥಿಗಳಲ್ಲಿ 101 ತೇರ್ಗಡೆಯಾಗುವ ಮೂಲಕ ಕಾಲೇಜು ಶೇ.71ರಷ್ಟು ಫಲಿತಾಂಶ ಪಡೆದುಕೊಂಡಿದೆ. ವಾಣಿಜ್ಯ ವಿಭಾಗದ ಶೇ.76.11 ಹಾಗೂ ಕಲಾ ವಿಭಾಗ ಶೇ. 6, ವಿಜ್ಞಾನ ವಿಭಾಗ ಶೇ.93 ಫಲಿತಾಂಶ ಪಡೆದುಕೊಂಡಿದೆ.