ಸೋಮವಾರಪೇಟೆಯಲ್ಲಿ ಅಕ್ರಮ ಜೂಜಾಟ : ನಗದು ಸಹಿತ ಎಂಟು ಮಂದಿಯ ಬಂಧನ

July 15, 2020

ಮಡಿಕೇರಿ ಜು. 15 : ಸೋಮವಾರಪೇಟೆ ಸಮೀಪದ ಕೂಗೇರಿಕೋಡಿ ಬಳಿಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಎಂಟು ಮಂದಿಯನ್ನು ರೂ. 10,020 ನಗದು ಸಹಿತ ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೂಗೇಕೋಡಿಯ ಸಬ್ಬನಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಸಬ್ಬನಕೊಪ್ಪದ ನಿವಾಸಿ ಕೆ.ವಿ. ಕುಮಾರ, ಕೆ.ವಿ. ಹೂವಣ್ಣ, ಕೂಗೇಕೋಡಿಯ ಕಿಶೋರ್‍ಕುಮಾರ್, ಮನು, ಚಿಣ್ಣಪ್ಪ, ಚಿಕ್ಕತೋಳೂರಿನ ಶಿವಕುಮಾರ್, ಗೆಜ್ಜೆಹಣಕೋಡಿನ ದರ್ಶನ್, ರೋಹಿತ್ ಅವರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಠಾಣಾಧಿಕಾರಿ ಶಿವಶಂಕರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ನವೀನ್, ಜಗದೀಶ್, ಬಸಪ್ಪ, ವಸಂತ್ ಅವರುಗಳು ಭಾಗವಹಿಸಿದ್ದರು.

error: Content is protected !!