ಭದ್ರಗೂಳ ಗ್ರಾಮದಲ್ಲಿ ಕಾಡಾನೆಗಳ ಹಾವಳಿ : ಬೆಳೆ ನಾಶ

July 15, 2020

ಮಡಿಕೇರಿ ಜು. 15 : ತಿತಿಮತಿ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಗೂಳ ಗ್ರಾಮದ ಎಂ.ಆರ್. ದಿನೇಶ್ ಎಂಬುವರಿಗೆ ಸೇರಿದ ಮರಗೆಣಸು ಮತ್ತು ಶುಂಠಿ ಕೃಷಿಯ ಫಸಲನ್ನು ಕಾಡಾನೆ ತುಳಿದು ನಾಶಪಡಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ರಾತ್ರಿ ವೇಳೆಯಲ್ಲಿ ತೋಟ, ಗದ್ದೆಗಳಲ್ಲಿ ಓಡಾಟ ನಡೆಸುವ ಕಾಡಾನೆಗಳು ಸುತ್ತಮುತ್ತಲ ತೋಟಗಳಲ್ಲಿ ಬೆಳೆಸಲಾದ ಕಾಫಿ, ಮೆಣಸು, ಬಾಳೆ, ಅಡಿಕೆ, ಮರಗೆಣಸು, ಶುಂಠಿ ಮುಂತಾದ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

error: Content is protected !!